ಮೊಸಳೆ ಚರ್ಮದ ಹ್ಯಾಂಡ್ ಬ್ಯಾಗ್ ಒಂದಕ್ಕೆ ಸೂಕ್ತ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಹ್ಯಾಂಡ್ ಬ್ಯಾಗ್ ಅನ್ನೇ ನಾಶ ಮಾಡಿರುವ ಘಟನೆ ನಡೆದಿದೆ.
ಹೌದು, ಆಸ್ಟ್ರೇಲಿಯಾ ಗಡಿ ಫೋರ್ಸ್ ಅಧಿಕಾರಿಗಳು ಮಹಿಳೆಯೊಬ್ಬರು ತೆಗೆದುಕೊಂಡು ಹೋಗುತ್ತಿದ್ದ ಮೊಸಳೆ ಚರ್ಮದ ಹ್ಯಾಂಡ್ ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಈ ರೀತಿಯ ಬ್ಯಾಗ್ ಅನ್ನು ಬಳಸುವುದಕ್ಕೆ ಅವಕಾಶವಿದೆ. ಆದರೆ ಅದಕ್ಕೆ ಪೂರ್ವಾನುಮತಿ ಕಡ್ಡಾಯ. ಆದರೆ ಕಸ್ಟಮ್ಸ್ ಅಧಿಕಾರಿಗಳು ಮಹಿಳೆಗೆ ಸೂಕ್ತ ದಾಖಲೆ ಒದಗಿಸುವಂತೆ ಕೇಳಿದಾಗ, ಅವುಗಳನ್ನು ನೀಡದಿರುವುದರಿಂದ ಅದನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಅಕ್ರಮ ಪ್ರಾಣಿಗಳ ಚರ್ಮ ಮಾರಾಟಕ್ಕೆ ತಡೆಯೊಡ್ಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಈ ಹ್ಯಾಂಡ್ ಬ್ಯಾಗ್ ಬೆಲೆ 14 ಲಕ್ಷ ರೂ. ಆಗಿತ್ತು. ಮಹಿಳೆಗೆ ದಾಖಲೆ ನೀಡುವಂತೆ ಕೇಳಿದಾಗ ಫ್ರಾನ್ಸ್ ಸರಕಾರದ ದಾಖಲೆಗಳನ್ನು ನೀಡಿದ್ದಾರೆ ಹೊರತು, ಆಸ್ಟ್ರೇಲಿಯಾ ಅರಣ್ಯ ಇಲಾಖೆ ನೀಡುವ ದಾಖಲೆಗಳನ್ನು ಒದಗಿಸಿಲ್ಲ. ಆದ್ದರಿಂದ ಅಧಿಕಾರಿಗಳು ಪರ್ಥ್‌ನಲ್ಲಿ ಬ್ಯಾಗ್ ಅನ್ನು ಜಪ್ತಿ ಮಾಡಿ ನಾಶಪಡಿಸಿದ್ದಾರೆ.