ಲೆಬನಾನ್ ಬೈರೂತ್ ಬಂದರಿನ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮಗಳು ಇನ್ನೂ ಕಡಿಮೆಯಾಗಿಲ್ಲ. 150 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಸ್ಫೋಟಕ್ಕೆ ಕಾರಣರಾದವರ ಬಗ್ಗೆ ಭಾರಿ ಆಕ್ರೋಶ ಆ ದೇಶದಲ್ಲಿ ಮನೆ ಮಾಡಿದೆ. ಈ ಎಲ್ಲದರ ನಡುವೆ ಕೆಲವು ಮಾನವೀಯ ಘಟನೆಗಳ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸ್ಪೋಟದಿಂದ ಗಾಯಗೊಂಡು ಕಣ್ಣು ಕಳೆದುಕೊಂಡ ಪಾರಿವಾಳವೊಂದನ್ನು ಸಿರಿಯಾ ಮೂಲದ ಅಬ್ದೆಲ್ ಸಲಾಮ್ ಎಂಬ ವ್ಯಕ್ತಿ ರಕ್ಷಿಸಿದ ವಿಡಿಯೋ ಟ್ವಿಟರ್ ನಲ್ಲಿ ಅಪ್ಲೋಡ್ ಆಗಿದೆ. ಇದಕ್ಕೆ ಈಗ ನೆಟ್ಟಿಗರು ಫಿದಾ ಆಗಿದ್ದಾರೆ.
ಮಿಡಲ್ ಈಸ್ಟ್ ನ ನ್ಯೂಯಾರ್ಕ್ ಟೈಮ್ಸ್ ವರದಿಗಾರ ವಿವಿಯನ್ ಯೀ ಎಂಬುವವರು ಟ್ವೀಟರ್ ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಬಾಟಲಿಯ ಮುಚ್ಚಳದಲ್ಲಿ ಪಾರಿವಾಳಕ್ಕೆ ಸಲಾಮ್ ನೀರು ಕುಡಿಸುತ್ತಿರುವ ಸನ್ನಿವೇಶ ವಿಡಿಯೋದಲ್ಲಿ ದಾಖಲಾಗಿದೆ. ಈ ಮೂಲಕ ಅದರ ಆರೈಕೆಯಲ್ಲಿ ನಿರತನಾಗಿದ್ದಾನೆ.
https://twitter.com/VivianHYee/status/1291411264363790341?ref_src=twsrc%5Etfw%7Ctwcamp%5Etweetembed%7Ctwterm%5E1291411264363790341%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fbeirut-explosion-syrian-man-wins-hearts-online-as-a-video-of-him-helping-injured-pigeon-have-water-goes-viral%2F633740