ಭೌತಶಾಸ್ತ್ರಕ್ಕೆ ಹೊಸ ಆಯಾಮವನ್ನೇ ಕೊಟ್ಟ ವಿಶ್ವಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಕೈಬರಹದಲ್ಲೇ ಇರುವ ಅವರದ್ದೇ ಸೂತ್ರವಾದ E=mc2 ಎಂದು ಬರೆಯಲಾದ ಪತ್ರವೊಂದು $1.2 ದಶಲಕ್ಷಕ್ಕೂ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿದೆ. ಅಂದುಕೊಂಡದ್ದಕ್ಕಿಂತ ಮೂರು ಪಟ್ಟು ಹೆಚ್ಚಿನ ಮೊತ್ತಕ್ಕೆ ಈ ಪತ್ರ ಹರಾಜಾಗಿದೆ ಎಂದು ಬೋಸ್ಟನ್ ಮೂಲದ ಹರಾಜುದಾರ ಸಂಸ್ಥೆ ತಿಳಿಸಿದೆ.
ಬರೋಬ್ಬರಿ 48 ಲಕ್ಷ ರೂಪಾಯಿ ಮೌಲ್ಯದ ಗುಟ್ಕಾ, ಪಾನ್ ಮಸಾಲ ತುಂಬಿದ್ದ ಲಾರಿ ಹೈಜಾಕ್
ಕ್ಯಾಲಿಫೋರ್ನಿಯಾದ ತಾಂತ್ರಿಕ ವಿವಿ ಹಾಗೂ ಜೆರುಸಲೇಂನ ಹೆಬ್ರೂ ವಿವಿಯ ಐನ್‌ಸ್ಟೀನ್ ಪೇಪರ್ಸ್ ಪ್ರಾಜೆಕ್ಟ್‌ನ ಆರ್ಕಿವಿಸ್ಟ್‌ಗಳು ಹೇಳುವಂತೆ ಈ ಮೇಧಾವಿ ವಿಜ್ಞಾನಿಯ ಕೈಬರಹದಲ್ಲೇ ಇರುವ ಈ ಸೂತ್ರದ ಮೂರೇ ಮೂರು ಪತ್ರಗಳು ಇವೆಯಂತೆ.
ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದ ಯುವಕರು; ಹಾರ ಹಾಕಿ ತಿಲಕವಿಟ್ಟು ಆರತಿ ಬೆಳಗಿದ ಪೊಲೀಸರು…!
ಮೊನ್ನೆ ಹರಾಜಿಗೆ ಹಾಕಲಾದ ಈ ಪತ್ರವು ಇಂಥ ನಾಲ್ಕನೇಯದ್ದಾಗಿದ್ದು, ಖಾಸಗಿ ಒಡೆತನದಲ್ಲಿರುವ ಏಕೈಕ ಪತ್ರವಾಗಿದೆ. ಈ ಪತ್ರವನ್ನು $400,000ಕ್ಕೆ ಮಾರಾಟ ಮಾಡುವ ನಿರೀಕ್ಷೆಯನ್ನು ಹರಾಜು ಸಂಸ್ಥೆ ಇಟ್ಟುಕೊಂಡಿತ್ತು. ಅಂದುಕೊಂಡದ್ದಕ್ಕಿಂತ ಮೂರು ಪಟ್ಟು ಹೆಚ್ಚಿನ ಮೊತ್ತಕ್ಕೆ ಪತ್ರ ಮಾರಾಟವಾಗಿದೆ.