
ಅಲಾಸ್ಕಾದ ಮಹಿಳೆ ಕ್ರಿಸ್ಟಲ್ ಹಿಕ್ಸ್ ಎಂಬಾಕೆಗೆ 18,000 ಅಡಿ ಎತ್ತರದಲ್ಲಿ ವಿಮಾನದಲ್ಲಿ ಹಾರಾಟ ಮಾಡುತ್ತಿದ್ದ ವೇಳೆ ಹೆರಿಗೆಯಾಗಿದ್ದು, ತನ್ನ ಮಗನಿಗೆ ’ಸ್ಕೈ’ ಎಂದೇ ಹೆಸರಿಟ್ಟಿದ್ದಾರೆ.
ತುಂಬು ಗರ್ಭಿಣಿಯಾಗಿದ್ದ ಹಿಕ್ಸ್‌ರನ್ನು ಡೆಲಿವರಿಗೆಂದು ಆಂಕರೇಜ್‌ಗೆ ವಿಮಾನದಲ್ಲಿ ಹೊತ್ತೊಯ್ಯುತ್ತಿದ್ದ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲೇ ಹೆರಿಗೆಯಾಗಿದೆ. ವಿಮಾನವನ್ನೇರಿದ ಒಂದು ಗಂಟೆ ಅವಧಿಯೊಳಗೇ ಮಗುವಿಗೆ ಜನ್ಮವಿತ್ತಿದ್ದಾರೆ ಹಿಕ್ಸ್.
ಆಗಸ್ಟ್ 5ರಂದು ಬೆಳಗ್ಗಿನ ಜಾವ 1 ಗಂಟೆಗೆ ಜನ್ಮವಿತ್ತ ಈ ಮಗುವಿಗೆ ’ಸ್ಕೈ ಐರಾನ್ ಹಿಕ್ಸ್’ ಎಂದು ಹೆಸರಿಡಲಾಗಿದೆ. ಮಗುವಿನ ಜನನ ಪ್ರಮಾಣ ಪತ್ರದಲ್ಲಿ, ಆತ ಜನಿಸಿದ ಜಾಗ ಯಾವುದು ಎಂದು ಉಲ್ಲೇಖಿಸುವ ವಿಚಾರವಾಗಿ ಈಗ ಸಾಕಷ್ಟು ಗೊಂದಲಗಳಿವೆ.