ಫಿಲಿಪ್ಪೀನ್ಸ್‌ನ ವಿಮಾನ ನಿಲ್ದಾಣವೊಂದರ ಸಿಬ್ಬಂದಿ ಪ್ರಯಾಣಿಕರೊಬ್ಬರ ಶೂಗಳಲ್ಲಿ ಅಡಗಿದ್ದ 119 ಟರಾಂಟುಲಾ ಜೇಡಗಳನ್ನು ಪತ್ತೆ ಮಾಡಿದ್ದಾರೆ.
ಮನಿಲಾದ ನಿನೋಯ್ ಅಕಿನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೋಲೆಂಡ್‌ಗೆ ಹೋಗುತ್ತಿದ್ದ ಪ್ರಯಾಣಿಕನೊಬ್ಬನ ಬೂಟುಗಳಲ್ಲಿ ಪಾರ್ಸೆಲ್ ಒಂದನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸಣ್ಣ ಪ್ಲಾಸ್ಟಿಕ್ ಪೌಚ್‌ಗಳಲ್ಲಿ ಈ ಜೇಡಗಳನ್ನು ಇರಿಸಲಾಗಿತ್ತು.
ಮೈಮೇಲೆ ರೋಮಗಳಿರುವ ಜೇಡಗಳಾದ ಟರಾಂಟುಲಾಗಳು ಅಳಿವಿನಂಚಿನಲ್ಲಿರುವ ಜೀವಿಗಳಾಗಿವೆ. ಇವುಗಳ ಕಳ್ಳಸಾಗಾಟಕ್ಕೆ ಒಂದು ವರ್ಷದವರೆಗೂ ಜೈಲು ಸೇರಬಹುದಾದ ಶಿಕ್ಷೆಯನ್ನು ಫಿಲಿಪ್ಪೀನ್ಸ್ ಕಾನೂನು ಕೊಡಮಾಡುತ್ತದೆ.
ಕಳೆದ ವರ್ಷ ಇಂಥದ್ದೇ ಘಟನೆಯೊಂದರಲ್ಲಿ, ಓಟ್‌ಮೀಲ್ ಬಾಕ್ಸ್‌ನಲ್ಲಿ ಬಚ್ಚಿಟ್ಟಿದ್ದ 757 ಜೀವಂತ ಟರಂಟುಲಾಗಳು ಹಾಗೂ 87 ಇತರ ಜಾತಿ ಜೇಡಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.