ನ್ಯೂಯಾರ್ಕ್: ಕ್ರಿಸ್ಮಸ್ ದಿನ ಸಾಂತಾಕ್ಲಾಸ್ ಬಂದು ಮಕ್ಕಳಿಗೆ ಉಡುಗೊರೆ ಕೊಟ್ಟು ಹೋಗುವುದು ವಾಡಿಕೆ. ಇದಕ್ಕಾಗಿ ಮಕ್ಕಳು ಪ್ರತಿ ವರ್ಷ ಸಾಂತಾ ಕ್ಲಾಸ್ ಗಾಗಿ ಕಾಯುತ್ತಿರುತ್ತಾರೆ. ಇಲ್ಲೊಬ್ಬ ಬಾಲಕಿ ಸಾಂತಾ ಕ್ಲಾಸ್ ಗೆ ಬರೆದ ಪತ್ರ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.
9 ವರ್ಷದ ಬಾಲಕಿ ಬರೆದ ಪತ್ರವನ್ನು ಆಕೆಯ ಅಕ್ಕ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾಳೆ. ಬಾಲಕಿ ಬೇಡಿಕೆ ಇಟ್ಟ ಉಡುಗೊರೆಗಳ ಪಟ್ಟಿ ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಇನ್ನು ಹಲವರು ಅಪ್ ವೋಟ್ ನೀಡಿದ್ದಾರೆ.
ಪ್ರೀತಿಯ ಕ್ರಿಸ್ಮಸ್ ತಾತಾ, ನೀನು ಉತ್ತಮವಾದ ವರ್ಷ ಕಳೆದಿರುವೆ ಎಂದುಕೊಂಡಿದ್ದೇನೆ. ಮತ್ತು ನೀನು ಖುಷಿಯಲ್ಲಿರುವೆ ಎಂದುಕೊಂಡಿದ್ದೇನೆ. ಆದರೆ, ಈ ವರ್ಷ ನನಗೆ ಸಂಪೂರ್ಣ ವ್ಯತಿರಿಕ್ತವಾಗಿತ್ತು. ನಾನು ಖುಷಿಯಿಂದ ಇರಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಿಲ್ಲ. ನಾನು ಅತ್ಯಂತ ವಿಧೇಯಳಾಗಿದ್ದೇನೆ. ಉಡುಗೊರೆ ಪಡೆಯಲು ಅರ್ಹನಾಗಿದ್ದೇನೆ. ಇದರಿಂದ ಈ ಉಡುಗೊರೆಗಳನ್ನು ತಾ” ಎಂದು ಬಾಲಕಿ ಬರೆದಿದ್ದಾಳೆ. ಬಾಲಕಿ ತನಗೆ ಬೇಕಿರುವ ಏರ್ ಪಾಡ್ ಸೇರಿ 12 ವಸ್ತುಗಳ ಪಟ್ಟಿ ಮಾಡಿದ್ದಾಳೆ.
https://twitter.com/AllyTheJedi/status/1338732848895954945?ref_src=twsrc%5Etfw%7Ctwcamp%5Etweetembed%7Ctwterm%5E1338732848895954945%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2F9-year-olds-letter-to-santa-claus-has-left-netizens-in-splits-7108502%2F
https://twitter.com/jwoods603/status/1339408858133884928?ref_src=twsrc%5Etfw%7Ctwcamp%5Etweetembed%7Ctwterm%5E1339409283956551683%7Ctwgr%5E%7Ctwcon%5Es2_&ref_url=https%3A%2F%2Findianexpress.com%2Farticle%2Ftrending%2Ftrending-globally%2F9-year-olds-letter-to-santa-claus-has-left-netizens-in-splits-7108502%2F