alex Certify ಕೊರೊನಾ ಹರಡುವಿಕೆ ಕುರಿತಂತೆ ಶಾಕಿಂಗ್‌ ಸಂಗತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹರಡುವಿಕೆ ಕುರಿತಂತೆ ಶಾಕಿಂಗ್‌ ಸಂಗತಿ ಬಹಿರಂಗ

ಕೊರೊನಾ ವೈರಸ್​ ನಮ್ಮ ಜೀವನದ ಸಂತೋಷವನ್ನ ಸ್ವಾಧೀನ ಪಡಿಸಿಕೊಂಡಿದ್ದರಿಂದ ಈ ವೈರಸ್​ನಿಂದ ಪಾರಾಗೋಕೆ ಪ್ರತಿಯೊಬ್ಬರು ಅವರ ಕೈಲಾದ ಅತ್ಯುತ್ತಮ ಪ್ರಯತ್ನವನ್ನ ಮಾಡುತ್ತಿದ್ದಾರೆ. ಅನೇಕರು ಕೊರೊನಾ ಹಬ್ಬುತ್ತೆ ಎಂಬ ಕಾರಣಕ್ಕೆ ಆಸ್ಪತ್ರೆ ಅಥವಾ ಚಿಕಿತ್ಸಾಲಯಕ್ಕೆ ಭೇಟಿ ನೀಡೋದನ್ನೂ ಬಂದ್​ ಮಾಡಿದ್ದಾರೆ.

ಆದರೆ ನೀವು ಕೂಡ ಈ ರೀತಿ ಕೊರೊನಾಗೆ ಹೆದರಿಕೊಂಡು ಆಸ್ಪತ್ರೆ ಕಡೆ ಮುಖ ಮಾಡದೇ ಇದ್ದವರ ಸಾಲಿಗೆ ಸೇರಿದವರಾಗಿದ್ದರೆ ಇತ್ತೀಚಿನ ಅಧ್ಯಯನವೊಂದು ನಿಮಗೆ ಎರಡೆರಡು ಬಾರಿ ಈ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತೆ.

ಫ್ರಾನ್ಸ್​ನ ನಾಂಟೆಸ್​ ವಿಶ್ವವಿದ್ಯಾಲಯದ ಸೆಂಟ್ರಲ್​ ಆಸ್ಪತ್ರೆ ಸಂಶೋಧಕರು ಜನವರಿ 1 ಹಾಗೂ ಅಕ್ಟೋಬರ್​ 27ರ ನಡುವೆ ಅಮೆರಿಕ, ಇಟಲಿ, ಚೀನಾ, ಹಾಂಗ್​ಕಾಂಗ್​ ಸೇರಿದಂತೆ ಒಟ್ಟು 8 ರಾಷ್ಟ್ರಗಳ ಕೋವಿಡ್​ ಆಸ್ಪತ್ರೆಗಳ ಮೇಲೆ ಈ ಅಧ್ಯಯನ ನಡೆಸಿದೆ.

ಐಸಿಯು, ಕ್ಲಿನಿಕ್​, ದಾದಿಯರ ನಿಲ್ದಾಣ, ಸಾರ್ವಜನಿಕ ಪ್ರದೇಶ, ಸಾರ್ವಜನಿಕ ಶೌಚಾಲಯ ಹೀಗೆ ಜನಸಂದಣಿ ಜಾಸ್ತಿ ಇರುವ ಪ್ರದೇಶಗಳ ಗಾಳಿಯ ಗುಣಮಟ್ಟವನ್ನ ಪರೀಕ್ಷೆ ಮಾಡಲಾಯ್ತು.

ಒಟ್ಟು 893 ಮಾದರಿಗಳಲ್ಲಿ ಐಸಿಯು ಕೋಣೆಯಲ್ಲಿ 25.2 ಪ್ರತಿಶತದಷ್ಟು ಕೊರೊನಾ ಹರಡುವ ಅಪಾಯವಿದೆ. ಕಲುಷಿತ ಪ್ರದೇಶ, ಸಾರ್ವಜನಿಕ ಶೌಚಾಲಯ ಅಥವಾ ಸ್ನಾನಗೃಹಗಳಲ್ಲಿ 23.8 ಪ್ರತಿಶತದಷ್ಟು ಕೊರೊನಾ ಅಪಾಯವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...