
ವಾಯುಮಾಲಿನ್ಯವು ಮಾನವನಿಗೆ ಮಧುಮೇಹ ಬರಲು ನೇರ ಕಾರಣವಾಗಬಲ್ಲದು ಎಂದು ಭಾರತೀಯ ಮೂಲದ ಅಮೆರಿಕ ವಿಜ್ಞಾನಿಯೊಬ್ಬರು ಸಂಶೋಧನೆಯಲ್ಲಿ ಪತ್ತೆ ಹಚ್ಚಿದ್ದಾರೆ.
ಅಮೆರಿಕ ಹ್ಯಾರಿಂಗ್ಟನ್ ವಿಶ್ವ ವಿದ್ಯಾಲಯ ಆಸ್ಪತ್ರೆಯ ಸಂಜಯ ರಾಜಗೋಪಾಲನ್ ಈ ನಿಟ್ಟಿನಲ್ಲಿ ಸಂಶೋಧನೆ ನಡೆಸಿದ್ದಾರೆ. ಕ್ಲಿನಿಕಲ್ ಇನ್ವೆಸ್ಟಿಗೇಶನ್ ಎಂಬ ಜರ್ನಲ್ ನಲ್ಲಿ ಅಧ್ಯಯನದ ಅಂಶಗಳನ್ನು ಪ್ರಕಟಿಸಿದ್ದಾರೆ.
ವಾಯು ಮಾಲಿನ್ಯದಿಂದ ಮಧುಮೇಹ ಮಾತ್ರವಲ್ಲದೆ, ಮಾರಣಾಂತಿಕವಾದ ಹೃದಯಾಘಾತ ಹಾಗೂ ಪಾರ್ಶ್ವವಾಯು ಮುಂತಾದ ಸಮಸ್ಯೆಗಳೂ ಬರಬಹುದು ಎಂದು ಸಂಶೋಧನಾ ಪ್ರಬಂಧದಲ್ಲಿ ಸಂಜಯ ವಿವರಿಸಿದ್ದಾರೆ.
“ವಾಹನಗಳು ಉಗುಳುವ ಹೊಗೆ, ವಿದ್ಯುತ್ ಉತ್ಪಾದನೆ, ಮತ್ತು ಇತರ ಇಂಧನ ತ್ಯಾಜ್ಯಗಳಿಂದ ಪರಿಸರದ ಮೇಲೆ ಉಂಟಾಗುವ ಪ್ರಭಾವ. ವಾಯು ಮಾಲಿನ್ಯ ಎಂಪಿ- 2.5 ಕುರಿತು ಅಧ್ಯಯನವನ್ನು ಕೇಂದ್ರೀಕರಿಸಿದ್ದೆವು. ನವದೆಹಲಿ ಅಥವಾ ಬೀಜಿಂಗ್ ನಂಥ ನಗರಗಳ ಅತ್ಯಂತ ಮಾಲಿನ್ಯಯುಕ್ತ ಒಂದು ದಿನದ ಪರಿಸ್ಥಿತಿಯನ್ನು ಅಧ್ಯಯನಕ್ಕಾಗಿ ಸೃಷ್ಟಿ ಮಾಡಿದ್ದೆವು” ಎಂದು ಸಂಜಯ ಹೇಳಿದ್ದಾರೆ.