
ಸಾಕು ನಾಯಿಗಳು ಹಾಗೂ ಬೆಕ್ಕುಗಳು ಮಾಡುವ ತುಂಟಾಟ ನೋಡುವುದೇ ಒಂದು ಖುಷಿ. ಇವುಗಳು ದೊಡ್ಡವಾಗುತ್ತಾ ಬಂದಂತೆ ಇನ್ನಷ್ಟು ಬುದ್ಧಿ ಬಲಿತು ಸುತ್ತಲಿನ ಜಗತ್ತನ್ನು ಮತ್ತಷ್ಟು ಕುತೂಲದಿಂದ ಗಮನಿಸಲು ಆರಂಭಿಸುತ್ತವೆ.
17 ವರ್ಷದ ಶ್ವಾನವೊಂದು ಪಾರ್ಕ್‌ನಲ್ಲಿ ’ಝೂಮೀಸ್’ ಮಾಡಿಕೊಂಡು, ಸುತ್ತಲೂ ರೌಂಡ್ ಹಾಕಿಕೊಂಡು ಮೋಜು ಅನುಭವಿಸುತ್ತಿರುವ ವಿಡಿಯೋವೊಂದನ್ನು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಸಾಮಾನ್ಯವಾಗಿ ನಾಯಿಗಳ ಸರಾಸರಿ ಆಯುಷ್ಯ 15 ವರ್ಷಗಳು. ಆದರೂ ಸಹ ಈ ಶ್ವಾನವು ತನ್ನ ಇಳಿವಯಸ್ಸಿನಲ್ಲೂ ಇಷ್ಟೊಂದು ಲವಲವಿಕೆಯಿಂದ ಇರುವುದನ್ನು ಕಂಡ ನೆಟ್ಟಿಗರು ಬಲೇ ಖುಷಿ ಪಟ್ಟಿದ್ದಾರೆ.