ಮಾಸ್ಕೋ: ರಷ್ಯಾದಿಂದ ಎರಡನೇ ಕೊರೊನಾ ಲಸಿಕೆಯನ್ನು ಬಿಡುಗಡೆ ಮಾಡಲಿದ್ದು, ಶೀಘ್ರವೇ ಮೂರನೇ ಲಸಿಕೆಯನ್ನು ಕೂಡ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ಕುರಿತು ಮಾಹಿತಿ ನೀಡಿದ್ದಾರೆ. ರಷ್ಯಾ ಸರ್ಕಾರ ಮೂರನೇ ಹಂತದ ಪ್ರಾಯೋಗಿಕ ಹಂತ ಪೂರ್ಣವಾಗುವ ಮೊದಲೇ ‘ಸ್ಪುಟ್ನಿಕ್’ ಹೆಸರಿನಲ್ಲಿ ಕೋವಿಡ್ ಲಸಿಕೆ ಬಿಡುಗಡೆ ಮಾಡಿತ್ತು.
ಪುಟಿನ್ ಅವರು ನೀಡಿರುವ ಮಾಹಿತಿಯಂತೆ, ರಷ್ಯಾ ಸರ್ಕಾರ ಮತ್ತೊಂದು ಲಸಿಕೆ ಬಿಡುಗಡೆಗೆ ಅನುಮೋದನೆ ನೀಡಿದೆ. ‘ಎಪಿ ವ್ಯಾಕ್ ಕೊರೊನಾ’ ಹೆಸರಲ್ಲಿ ಎರಡನೇ ಲಸಿಕೆಯನ್ನು ಬಿಡುಗಡೆ ಮಾಡಲಾಗುವುದು. ಈ ಲಸಿಕೆಯನ್ನು ವೆಕ್ಟರ್ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಮೂರನೇ ಹಂತದ ಪ್ರಯೋಗಕ್ಕೂ ಮೊದಲೇ ಈ ಲಸಿಕೆಯನ್ನು ಕೂಡ ಬಿಡುಗಡೆ ಮಾಡಲಾಗುತ್ತಿದೆ. ಇನ್ನು ಚೆಮಕೋವ್ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸುತ್ತಿರುವ ಮೂರನೇ ಕೊರೊನಾ ಲಸಿಕೆ ಕೂಡ ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗಿದೆ.