ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ನ ಯುಟ್ಯೂಬ್ ಕನಿಷ್ಟ ಒಂದು ವಾರಗಳ ಕಾಲ ಅಮಾನತು ಮಾಡಿದೆ. ಈ ಅಮಾನತು ಒಂದು ವಾರಕ್ಕಿಂತ ಅಧಿಕ ಸಮಯದವರೆಗೆ ಮುಂದುವರಿಯಲೂಬಹುದು ಅಂತಾ ಕಂಪನಿ ಹೇಳಿದೆ. ಯುಟ್ಯೂಬ್ನ ಷರತ್ತು ಹಾಗೂ ನಿಯಮಗಳಡಿಯಲ್ಲಿ ಈ ಕ್ರಮವನ್ನ ಕೈಗೊಳ್ಳಲಾಗಿದೆ.
ಡೊನಾಲ್ಡ್ ಟ್ರಂಪ್ ಚಾನೆಲ್ನಲ್ಲಿ ಇತ್ತೀಚಿಗೆ ಅಪ್ಲೋಡ್ ಮಾಡಲಾದ ವಿಡಿಯೋ ಹಿಂಸಾಚಾರವನ್ನ ಪ್ರಚೋದಿಸಿದೆ. ಹೀಗಾಗಿ ಟ್ರಂಪ್ ಚಾನೆಲ್ಗಳಲ್ಲಿ ಇತ್ತೀಚಿಗೆ ಪೋಸ್ಟ್ ಮಾಡಲಾದ ವಿಡಿಯೋಗಳನ್ನ ಯುಟ್ಯೂಬ್ ತೆಗೆದು ಹಾಕಿದೆ. ಅಲ್ಲದೇ ಕನಿಷ್ಟ ಒಂದು ವಾರಗಳ ಕಾಲ ಟ್ರಂಪ್ಗೆ ಯುಟ್ಯೂಬ್ನಿಂದಲೂ ಕೊಕ್ ನೀಡಲಾಗಿದೆ.
ಟ್ವಿಟರ್ ಖಾತೆ ಈಗಾಗಲೇ ಟ್ರಂಪ್ರನ್ನ ಶಾಶ್ವತವಾಗಿ ಅಮಾನತು ಮಾಡಿದೆ. ಇತ್ತ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಕೂಡ ಟ್ರಂಪ್ಗೆ ಅನಿರ್ದಿಷ್ಟಾವಧಿ ನಿಷೇಧವನ್ನ ಹೇರಿವೆ. ಈ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಖ್ಯಾತ ಸಾಮಾಜಿಕ ಜಾಲತಾಣದ ವೇದಿಕೆ ಯುಟ್ಯೂಬ್ ಕೂಡ ಈ ನಿರ್ಧಾರ ಕೈಗೊಂಡಿದೆ.