ಬರ್ಲಿನ್ ಮೃಗಾಲಯವೊಂದರಲ್ಲಿ ಸೆರೆ ಹಿಡಿಯಲಾದ ಹೃದಯಸ್ಪರ್ಶಿ ಘಟನೆಯೊಂದರಲ್ಲಿ, ಹಿರಿಯ ಆನೆಯೊಂದು 12 ವರ್ಷಗಳ ಬಳಿಕ ತನ್ನ ಮಗಳನ್ನು ಭೇಟಿ ಮಾಡಿದೆ.
ಪೋರಿ ಹೆಸರಿನ 39 ವರ್ಷದ ಈ ಆನೆಯು ತನ್ನ ಮಗಳು ಟಾನಾಳ ಸೊಂಡಿಲನ್ನು ಸ್ಪರ್ಶಿಸುತ್ತಿರುವ ದೃಶ್ಯಕ್ಕೆ ಮೊಮ್ಮಕ್ಕಳಾದ ಟಮಿಕಾ ಹಾಗೂ ಎಲಾನಿ ಸಾಕ್ಷಿಯಾಗಿವೆ.
ಬರ್ಲಿನ್ ಮೃಗಾಲಯದಿಂದ ಪೋರಿಯನ್ನು ಅವಳ ಮಗಳು ಹಾಗೂ ಮೊಮ್ಮಕ್ಕಳು ಇರುವ ಜಾಗಕ್ಕೆ ಕರೆದೊಯ್ಯಲಾಗಿದೆ. ಸದ್ಯಕ್ಕೆ ಈ ಅಜ್ಜಿ-ಅಮ್ಮ-ಮೊಮ್ಮಕ್ಕಳನ್ನು ಪ್ರತ್ಯೇಕವಾದ ಜಾಗಗಳಲ್ಲಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ಇವರೆಲ್ಲರಿಗೆ ಒಂದು ಗೆಟ್ ಟುಗೆದರ್ ಹಮ್ಮಿಕೊಳ್ಳಲು ಮೃಗಾಲಯದ ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ.
ಜಿಂಬಾಬ್ವೆಯ ಕಾನನದಲ್ಲಿ ಜನಿಸಿದ ಪೋರಿಳನ್ನು ಜರ್ಮನಿಯ ಮಗ್ಡೇಬರ್ಗ್ ಮೃಗಾಲಯಕ್ಕೆ 1983ರಲ್ಲಿ ಕರೆತರಲಾಗಿತ್ತು. 14 ವರ್ಷಗಳ ಬಳಿಕ ಈಕೆಯನ್ನು ಹೆಸರಿಗೆ ಸಂಬಂಧಿ ಉದ್ದೇಶಗಳಿಗಾಗಿ ಬರ್ಲಿನ್‌ಗೆ ಕಳುಹಿಸಲಾಗಿತ್ತು. 2001ರಲ್ಲಿ ಮಗಳು ಟಾನಾಗೆ ಜನ್ಮವಿತ್ತಿದ್ದಾಳೆ ಪೋರಿ.