alex Certify ಕಣ್ಣಂಚನ್ನು ತೇವಗೊಳಿಸುತ್ತೆ ಅನಾಥ ಬಾಲಕನ ಹೃದಯ ಕಲಕುವ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಅನಾಥ ಬಾಲಕನ ಹೃದಯ ಕಲಕುವ ಮನವಿ

ನ್ಯೂಯಾರ್ಕ್: ಅನಾಥ ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಬೆಳೆಯುತ್ತಿರುವ ಬಾಲಕ ಹೊಸ ಅಪ್ಪ – ಅಮ್ಮನಿಗಾಗಿ ಬೇಡುವ ವಿಡಿಯೋವೊಂದು ನೆಟ್ಟಿಗರ ಮನ ಕಲಕಿದೆ.

ಜೋರ್ಡನ್ ತನ್ನ ಮೂರನೇ ವಯಸ್ಸಿನಿಂದಲೇ ತನ್ನ ಅಣ್ಣ ಬೆರಿಸನ್ ಜೊತೆ ಮಕ್ಕಳ ಪೋಷಣಾ ಕೇಂದ್ರದಲ್ಲಿದ್ದ. ಈಗ ಆತನಿಗೆ ಆರು ವರ್ಷ. ಕಳೆದ ವರ್ಷ ಆತನ ಸಹೋದರ ಬೆರಿಸನ್ ನನ್ನು ಕುಟುಂಬವೊಂದು ದತ್ತು ಪಡೆದು ಕರೆದೊಯ್ದಿತ್ತು. ಅಂದಿನಿಂದ ಜೋರ್ಡನ್ ಗೆ ಒಬ್ಬಂಟಿತನ ಕಾಡುತ್ತಿದೆ.‌

ಫೋಕ್ಸ್ -59 ಎಂಬ ಟಿವಿ ಚಾನಲ್ ಆತನ ಕುರಿತ ಸುದ್ದಿಯೊಂದನ್ನು ಪ್ರಸಾರ ಮಾಡಿದೆ. ಆತ “ನಾನು ಮನೆ ಎಂದು ಕರೆಯುವಲ್ಲಿಗೆ ಹೋಗಬೇಕು. ನನಗೂ ಅಪ್ಪ, ಅಮ್ಮ ಬೇಕು. ವಿಶ್ವದ ಯಾವುದೇ ಕಡೆಗಾದರೂ ನಾನು ಹೋಗಲು ಸಿದ್ಧ. ಅಪ್ಪ ಅಥವಾ ಅಮ್ಮ ಯಾರೊಬ್ಬರಿದ್ದರೂ ಸಾಕು” ಎಂದು ಆತ ಹೇಳಿದ್ದು ಕೇಳಿದರೆ ಮನ ಮರುಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...