ಜೀವನದ ಅಮೂಲ್ಯ ಘಳಿಗೆಯನ್ನು ವಿವಿಧ ರೀತಿಯಲ್ಲಿ ನೆನಪಿಸಿಕೊಳ್ಳುವ ಮನುಷ್ಯ ಸಹಜಗುಣ. ಛಾಯಾಚಿತ್ರ, ವಿಡಿಯೋ, ಘಟನೆ ಮರುಸೃಷ್ಟಿಗಳ ಮೂಲಕ ನೆನಪು ಮೆಲುಕು ಹಾಕುವುದು ಸಾಮಾನ್ಯ.
ಇಲ್ಲೊಂದು ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅರವತ್ತು ದಶಕದ ಬಳಿಕ ಫೋಟೋಶೂಟ್ ಮೂಲಕ ವಿವಾಹದ ಫೋಟೋಗಳನ್ನು ಮರು ಸೃಷ್ಟಿಸಿದೆ.
ನೆಬ್ರಸ್ಕಾದ ಸ್ಟರ್ಲಿಂಗ್‌ನ ಮಾರ್ವಿನ್ ಮತ್ತು ಲುಸಿಲ್ಲೆ ಸ್ಟೋನ್ ಇತ್ತೀಚೆಗೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು. 60 ವರ್ಷಗಳ ಹಿಂದೆ ಮದುವೆಯಾದ ವೃದ್ಧ ದಂಪತಿ ತಮ್ಮ ವಿವಾಹದ ಫೋಟೋಗಳನ್ನು ಮರುಸೃಷ್ಟಿಸುವ ಮೂಲಕ ತಮ್ಮ ಇತ್ತೀಚಿನ ವಾರ್ಷಿಕೋತ್ಸವವನ್ನು ದಾಖಲಿಸಿದರು.
1960 ರಲ್ಲಿ ಸ್ಟರ್ಲಿಂಗ್‌ನ ಒಂದು ಸಣ್ಣ ಚರ್ಚ್‌ನಲ್ಲಿ ದಂಪತಿಗಳು ವಿವಾಹವಾದಾಗ, ಅವರು ಫೋಟೋಶೂಟ್ ಮಾಡಿಸಿದ್ದರು ಆರು ದಶಕಗಳ ನಂತರ, ಅವರು ತಮ್ಮ ವಿವಾಹದ ಉಡುಪನ್ನು ಧರಿಸಿ ಅದೇ ತೆರೆದ ಮೈದಾನದಲ್ಲಿ ಮರುಸೃಷ್ಟಿಸಿದರು. ಆ ಫೋಟೋಶೂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾರ್ವಿನ್ ಮತ್ತು ಲುಸಿಲ್ಲೆ ಅವರ 60 ನೇ ವಿವಾಹ ವಾರ್ಷಿಕೋತ್ಸವ ಆಚರಿಸಲು ಸಂತೋಷವಾಗಿದೆ. ಇಲ್ಲಿಯವರೆಗಿನ ನನ್ನ ನೆಚ್ಚಿನ ಸೆಷನ್‌ಗಳಲ್ಲಿ ಇದು ಒಂದಾಗಿರಬಹುದು! ಈ ಇಬ್ಬರು ಲವ್‌ಬರ್ಡ್‌ಗಳು ತಮ್ಮ ಮದುವೆಯ ಉಡುಪನ್ನು ಸೆಷನ್ ಗೆ ಧರಿಸಿದ್ದರು! ಎಂದು ಕೇಟೀ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
https://www.facebook.com/katieautryphotography/posts/3505731659451597