alex Certify ತನ್ನ ನಿಜವಾದ ತಂದೆ ಹಿನ್ನಲೆ ತಿಳಿದು ʼಶಾಕ್ʼ​ ಆದ ವೃದ್ಧೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ನಿಜವಾದ ತಂದೆ ಹಿನ್ನಲೆ ತಿಳಿದು ʼಶಾಕ್ʼ​ ಆದ ವೃದ್ಧೆ

ಹಸುಗೂಸಾಗಿದ್ದಾಗಲೇ ಉತ್ತರ ಕ್ಯಾರೋಲಿನಾದಲ್ಲಿ ದತ್ತು ಮಗುವಾಗಿ ಬೆಳೆದ 63 ವರ್ಷದ ಮಹಿಳೆಯೊಬ್ಬರು ತನ್ನ ನಿಜವಾದ ತಂದೆಯನ್ನ ಹುಡುಕುವ ಪ್ರಯತ್ನ ಮಾಡಿದ್ದಾರೆ. ಆದರೆ ಈಕೆ ನಿಜವಾದ ತಂದೆ ಯಾರೆಂದು ತಿಳಿದ ಬಳಿಕ ಶಾಕ್​ಗೊಳಗಾಗಿದ್ದಾರೆ.

2017ರಲ್ಲಿ ಕ್ಯಾಂಥಿ ಗಿಲ್​ಕ್ರಿಸ್ಟ್ ಡಿಎನ್​ಎ ಪರೀಕ್ಷೆಗೆ ಒಳಗಾಗಿದ್ದು ಇದರಲ್ಲಿ ಈಕೆಯ ತಂದೆ ರಾಷ್ಟ್ರೀಯ ತನಿಖಾ ದಳಕ್ಕೆ ಬೇಕಾಗಿದ್ದ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

1976ರಲ್ಲಿ ತನ್ನ ತಾಯಿ, ಪತ್ನಿ ಹಾಗೂ ಮೂವರು ಗಂಡು ಮಕ್ಕಳನ್ನ ಕೊಲೆ ಮಾಡಿದ ಆರೋಪದ ಅಡಿಯಲ್ಲಿ ತನಿಖಾ ದಳದಲ್ಲಿ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಗಿಲ್​ಕ್ರಿಸ್ಟ್ ಮೊದಲು ತನ್ನ ಮೂರನೇ ಸೋದರ ಸಂಬಂಧಿ ಸುಸಾನ್​ ಗಿಲ್ಮೋರ್​ ಎಂಬವರನ್ನ ಪತ್ತೆ ಮಾಡಿದ್ದಾಳೆ. ಡಿಎನ್​ಎ ಪರೀಕ್ಷೆಗೆ ಅರ್ಜಿ ತುಂಬುವ ವೇಳೆಯಲ್ಲಿ ಈಕೆ ತನ್ನ ಕುಟುಂಬಸ್ಥರನ್ನ ಹುಡುಕುತ್ತಾ ಇರೋದಾಗಿ ಹೇಳಿದ್ದಾಳೆ.

ತಾಯಿಯ ಕಡೆಯಿಂದ ಗಿಲ್ಮೋರ್​ರನ್ನ ಹುಡುಕಿದ್ದು ಈಕೆಗೆ ತಂದೆಯನ್ನ ಹುಡುಕುವ ಮಾರ್ಗವನ್ನ ಸರಾಗ ಮಾಡಿತು. ಇದಾದ ಬಳಿಕ ಕೈಗೊಳ್ಳಲಾದ ಡಿಎನ್​ಎ ಪರೀಕ್ಷೆಯಲ್ಲಿ ಗಿಲ್​ಕ್ರಿಸ್ಟ್​ ತಂದೆ ಯಾರೆಂದು ತಿಳಿದು ಬಂದಿದೆ.

ಗಿಲ್​ಕ್ರಿಸ್ಟ್​ ಜೈವಿಕ ತಂದೆ 84 ವರ್ಷದ ವಿಲಿಯಂ ಬ್ರಾಡ್ಬೋರ್ಡ್​ ಬಿಷಪ್​ ಜ್ಯೂನಿಯರ್​ ಕುಟುಂಬಸ್ಥರನ್ನೇ ಕೊಲೆ ಮಾಡಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಂದೆ ಈ ರೀತಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...