ರೇಸ್ ಗಳಲ್ಲಿ ಗೆದ್ದ ಬಳಿಕ ವಿನ್ನರ್ಗಳು ಪರಸ್ಪರರ ಮೇಲೆ ಶಾಂಪೇನ್ ಸುರಿದುಕೊಂಡು ಕುಣಿದಾಡುವುದು ಸಾಮಾನ್ಯ. ಅದರಲ್ಲೂ ಈಕ್ವೆಸ್ಟ್ರಿಯನ್ ರೇಸ್ಗಳಲ್ಲಿ ಈ ಸಂಭ್ರಮಾಚರಣೆಯ ಮಟ್ಟವೇ ಬೇರೆ ಇರಲಿದೆ.
ಆದರೆ ಇತ್ತೀಚಿಗೆ ವೈರಲ್ ಆದ ವಿಡಿಯೋವೊಂದರಲ್ಲಿ ರೇಸ್ ಗೆದ್ದ ವಿನ್ನರ್ ತನ್ನ ಕುದುರೆಗೆ ಬಲವಂತವಾಗಿ ಶಾಂಪೇನ್ನ ಕುಡಿಸುತ್ತಿರುವ ದೃಶ್ಯಾವಳಿಗೆ ಭಾರೀ ಟೀಕೆ ವ್ಯಕ್ತವಾಗಿದೆ.
ಪ್ರತಿಷ್ಠಿತ ಮಲೋಕ್ರಾ ಮನಕಾರ್ ಗ್ರ್ಯಾನ್ ಪ್ರೀ ರೇಸ್ನಲ್ಲಿ ಮೊದಲು ಗುರಿ ಮುಟ್ಟಿದ ಹೆಲೆನ್ ಲಿನಾಟ್ರಿಕ್ಸ್ ಹೆಸರಿನ ಈ ಕುದುರೆಗೆ ಹೀಗೆ ಒಂದಿಡೀ ಶಾಂಪೇನ್ ಬಾಟಲಿಯನ್ನು ಬಲವಂತವಾಗಿ ಕುಡಿಸುತ್ತಿರುವ ಮನಸ್ಥಿತಿಯ ಬಗ್ಗೆ ಪ್ರಾಣಿ ಪ್ರಿಯರು ಬಹಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ದೂರೊಂದನ್ನು ಪ್ರಾಣಿ ಹಿಂಸಾ ವಿರೋಧಿ ಸಂಘಟನೆ ಬಳಿ ದಾಖಲಿಸಲಾಗಿದೆ.