ಅಮೆರಿಕ ಮಾಜಿ ಅಧ್ಯಕ್ಷ ಅಬ್ರಹಾಮ್ ಲಿಂಕನ್ ರ ಕೂದಲೆಳೆಗಳನ್ನು ಹೊಂದಿರುವ ಟೆಲಿಗ್ರಾಂ ಒಂದನ್ನು ಮಾರಾಟಕ್ಕೆ ಇಡಲಾಗಿದೆ.
ಬೋಸ್ಟನ್‌ನ RR ಆಕ್ಷನ್ ಈ ಹರಾಜು ಪ್ರಕ್ರಿಯೆ ಮಾಡಲು ಮುಂದಾಗಿದೆ. 1865 ರಲ್ಲಿ ಲಿಂಕನ್‌ರನ್ನು ಹತ್ಯೆಗೈದ ವಿವರಗಳನ್ನು ಈ ಟೆಲಿಗ್ರಾಂ ಹೊಂದಿದೆ. ಈ ಟೆಲಿಗ್ರಾಂಗೆ ಆಕ್ಷನ್ ಹೌಸ್ ಕನಿಷ್ಠ $10,000 ನಿಗದಿ ಪಡಿಸಿದ್ದು, ಏನಿಲ್ಲವೆಂದರೂ $75,000ಕ್ಕೆ ಮಾರಾಟವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಈ ಕೂದಲೆಳೆಗಳನ್ನು ಲಿಂಕನ್‌ರ ಪೋಸ್ಟ್ ಮಾರ್ಟಂ ಮಾಡಿದ ವೇಳೆ ತೆಗೆದುಕೊಳ್ಳಲಾಗಿದೆ. ಇವುಗಳನ್ನು ಕೆಂಟುಕಿಯಲ್ಲಿರುವ ಪೋಸ್ಟ್ ಮಾಸ್ಟರ್ ಲೈಮನ್ ಬೇಚ್ ಟಾಡ್ ಎಂಬ ವ್ಯಕ್ತಿಗೆ ಕೊಡಲಾಗಿತ್ತು. ಟೆಡ್ ಲಿಂಕನ್ ಮಡದಿಯ ಸಹೋದರ ಸಂಬಂಧಿಯಾಗಿದ್ದಾರೆ. ಈ ಟೆಲಿಗ್ರಾಂ ಅನ್ನು ಏಪ್ರಿಲ್ 14, 1865ರ ಬೆಳಿಗ್ಗೆ 11 ಗಂಟೆ ವೇಳೆಗೆ ಸ್ವೀಕರಿಸಲಾಗಿತ್ತು.