
ಇಂಡೋನೇಷಿಯಾದ 17 ವರ್ಷದ ಯುವಕನೊಬ್ಬ ಬರೋಬ್ಬರಿ 11 ವರ್ಷಗಳ ಬಳಿಕ ಗೂಗಲ್ ಮ್ಯಾಪ್ನ ಸಹಾಯದಿಂದ ತನ್ನ ಕುಟುಂಬ ಸೇರಿದ್ದಾನೆ.
ಅನಾಥಾಶ್ರಮದಲ್ಲಿದ್ದ ಏರ್ವಾನ್ ವಾಹ್ಯೂ ಹೆಸರಿನ ಯುವಕ ಚಿಕ್ಕವನಿದ್ದಾಗ ತನ್ನ ಅಜ್ಜಿಯ ಜೊತೆ ಸುತ್ತುತ್ತಿದ್ದ. ಮಾರ್ಕೆಟ್ಗಳನ್ನ ನೆನಪಿನಲ್ಲಿ ಇಟ್ಟುಕ್ಕೊಂಡಿದ್ದ. ಹೀಗಾಗಿ ಗೂಗಲ್ ಮ್ಯಾಪ್ ಸಹಾಯದಿಂದ ಈ ಮಾರ್ಕೆಟ್ಗಳನ್ನ ಹುಡುಕಿದ್ದ ಯುವಕ ಆ ಸ್ಥಳದ ಮಾಹಿತಿಯನ್ನ ಕಲೆ ಹಾಕಿದ್ದ. ಬಳಿಕ ಇದೇ ಗೂಗಲ್ ಮ್ಯಾಪ್ ನೆರವಿನಿಂದ ತನ್ನ ಕುಟುಂಬವನ್ನ ಸೇರಿದ್ದಾನೆ.
ಬಾಲಕ 5 ವರ್ಷದವನಿದ್ದಾಗ ವಿಡಿಯೋ ಗೇಮ್ ಸ್ಟೋರ್ಗೆ ಬಂದಿದ್ದ. ಈ ವೇಳೆ ಈತನನ್ನ ಯಾರೋ ಅಪಹರಣ ಮಾಡಿದ್ದರು, ಬಳಿಕ ಅಲ್ಲಿ ಇಲ್ಲಿ ಸುತ್ತಾಡ್ತಾ ಇದ್ದ ಏರ್ವಾನ್ ಕಳೆದ 9 ವರ್ಷಗಳಿಂದ ಅನಾಥಾಶ್ರಮದಲ್ಲಿ ವಾಸಿಸಲು ಆರಂಭಿಸಿದ್ದ.
ಈತನ ಕುಟುಂಬವನ್ನ ಸೇರೋಕೆ ಅನಾಥಾಶ್ರಮ ಕೂಡ ತುಂಬಾನೇ ಸಹಾಯ ಮಾಡಿದೆ. ವಿಡಿಯೋ ಗೇಮಿಂಗ್ ಶಾಪ್ ಹಾಗೂ ಮಾರ್ಕೆಟ್ಗಳ ನೆರವಿನಿಂದ ಇದೀಗ ಏರ್ವಾನ್ ತನ್ನ ಪೋಷಕರ ಮಡಿಲು ಸೇರಿದ್ದಾನೆ.