alex Certify ಬಾಯ್ ಫ್ರೆಂಡ್ ಹತ್ಯೆ ಮಾಡಿ ಕೂಲಿ ಕಾರ್ಮಿಕರಿಗೆ ಆಹಾರವಾಗಿ ನೀಡಿದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯ್ ಫ್ರೆಂಡ್ ಹತ್ಯೆ ಮಾಡಿ ಕೂಲಿ ಕಾರ್ಮಿಕರಿಗೆ ಆಹಾರವಾಗಿ ನೀಡಿದ ಮಹಿಳೆ…!

ಮೊರಕ್ಕೊದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ಬಾಯ್ ಫ್ರೆಂಡ್ ಹತ್ಯೆ ಮಾಡಿದ್ದಾಳೆ. ಇಷ್ಟೇ ಅಲ್ಲ ಬಾಯ್ ಫ್ರೆಂಡ್ ದೇಹವನ್ನು ಕತ್ತರಿಸಿ ನಾಯಿಗೆ ಆಹಾರವಾಗಿ ನೀಡಿದ್ದಾಳೆ. ಬಾಯ್ ಫ್ರೆಂಡ್ ಇನ್ನೊಂದು ಮದುವೆಯಾಗಲು ಮುಂದಾಗಿದ್ದೇ ಇದಕ್ಕೆ ಕಾರಣವಾಗಿದೆ.

ಕಳೆದ 7 ವರ್ಷಗಳಿಂದ ಇಬ್ಬರೂ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಘಟನೆ ನಡೆದ ದಿನ ಮಹಿಳೆ ಮನೆಗೆ ಬಂದ ಬಾಯ್ ಫ್ರೆಂಡ್ ಬೇರೆ ಹುಡುಗಿ ಜೊತೆ ಮದುವೆಯಾಗ್ತಿರುವುದಾಗಿ ಹೇಳಿದ್ದಾನೆ. ಇದ್ರಿಂದ ಕೋಪಗೊಂಡ ಮಹಿಳೆ ಬಾಯ್ ಫ್ರೆಂಡ್ ಹತ್ಯೆ ಮಾಡಿದ್ದಾಳೆ. ಈ ಮಹಿಳೆ ವಯಸ್ಸು 30 ವರ್ಷ. ಇಬ್ಬರ ಮಧ್ಯೆ 10 ವರ್ಷಗಳ ಅಂತರವಿತ್ತು ಎನ್ನಲಾಗಿದೆ. ಸಾಂಪ್ರದಾಯಿಕ ಖಾದ್ಯದ ಜೊತೆ ಆತನ ದೇಹ ಬೆರೆಸಿ ಬೇಯಿಸಿದ್ದಾಳೆ. ಇದು ಸ್ವಲ್ಪ ಬಿರಿಯಾನಿ ರೀತಿಯಲ್ಲಿರುತ್ತದೆ.

ಈ ಆಹಾರವನ್ನು ಕೂಲಿ ಕಾರ್ಮಿಕರಿಗೆ ನೀಡಿದ್ದಾಳೆ. ಉಳಿದ ಭಾಗವನ್ನು ಕತ್ತರಿಸಿ ನಾಯಿಗೆ ಹಾಕಿದ್ದಾಳೆ. ಘಟನೆ ನಡೆದ ಸ್ವಲ್ಪ ಸಮಯದ ನಂತ್ರ ಬಾಯ್ ಫ್ರೆಂಡ್ ಸಹೋದರ ಮಹಿಳೆ ಮನೆಗೆ ಬಂದಿದ್ದಾನೆ. ಮನೆಯ ಬ್ಲಂಡರ್ ನಲ್ಲಿ ದಂತ ಸಿಕ್ಕಿದೆ. ಇದ್ರಿಂದ ಅನುಮಾನಗೊಂಡು ವಿಚಾರಿಸಿದಾಗ ಮಹಿಳ ವಿಷ್ಯ ಬಾಯ್ಬಿಟ್ಟಿದ್ದಾಳೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...