ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಮಕ್ಕಳಿಗೆ ಆನ್ಲೈನ್ ಪಾಠ ಹೇಳಿಕೊಡಲು ವ್ಯವಸ್ಥೆಗಳನ್ನೇನೋ ಮಾಡಿಕೊಳ್ಳಲಾಗಿದೆ. ಆದರೆ ಶಿಕ್ಷಕರು ಎದುರು ಇಲ್ಲದ ವೇಳೆಯಲ್ಲಿ ಮಕ್ಕಳು ಗಮನವಿಟ್ಟು ಈ ಕ್ಲಾಸ್‌ಗಳಲ್ಲಿ ಮಗ್ನರಾಗುತ್ತಾರೆ ಎಂದು ಹೇಳಲಾಗದು.
ಕಾರಾ ಮ್ಯಾಕ್‌ಡೊವೆಲ್ ಹೆಸರಿನ ಲೇಖಕಿಯೊಬ್ಬರು ತಮ್ಮ ಸುಪುತ್ರ ಯಾವ ಮಟ್ಟದಲ್ಲಿ ಆನ್ಲೈನ್ ಕ್ಲಾಸ್‌ನಲ್ಲಿ ತಲ್ಲೀನನಾಗಿದ್ದಾನೆ ಎಂಬ ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಝೂಮ್ ಮೂಲಕ ಆನ್ಲೈನ್ ಕ್ಲಾಸ್ ನಡೆಯುತ್ತಿದ್ದ ವೇಳೆ, ಲ್ಯಾಪ್ ಟಾಪ್ ಅನ್ನು ಟೇಬಲ್ ಮೇಲೆ ಇಟ್ಟುಕೊಂಡಿರುವ ಈ ಕಿಂಡರ್‌ಗಾರ್ಟನ್ ಬಾಲಕ, ಹಾಗೇ ಕುರ್ಚಿ ಮೇಲೆ ನಿದ್ರೆಗೆ ಜಾರಿದ್ದಾನೆ.
ಬಾಲಕನ ಈ ಚಿತ್ರವು 2020ರ ಇಡೀ ವರ್ಷದ ಮೂಡ್ ಅನ್ನು ಪ್ರತಿಬಿಂಬಿಸುವಂತಿದೆ. “ಖುದ್ದು ದೊಡ್ಡವರೇ 30 ನಿಮಿಷಗಳ ಕಾಲ ಝೂಮ್ ಕಾಲ್‌ನಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಹೀಗಿರುವಾಗ ಮಗುವೊಂದು 5 ಗಂಟೆಗಳಿಗಿಂತ ಹೆಚ್ಚಿನ ಅವಧಿಗೆ ಕೂತಿರುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಟ್ವಿಟ್ಟಿಗರೊಬ್ಬರು ಈ ಪೋಸ್ಟ್‌ಗೆ ಕಾಮೆಂಟ್ ಹಾಕಿದ್ದಾರೆ.