ಶ್ವಾನ ಹಾಗೂ ಮಾನವನ ಪ್ರೀತಿ ಒಂದೆರೆಡು ಬಾರಿ ಅಲ್ಲ. ಬದಲಿಗೆ ಹಲವು ಸಮಯದಲ್ಲಿ ಈ ಇಬ್ಬರ ಸಂಬಂಧ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಲೇ ಇದೆ. ಈ ಪ್ರೀತಿ ಬಾಂಧವ್ಯಕ್ಕೆ ಮತ್ತೊಂದು ತಾಜಾ ಉದಾಹರಣೆ ಸಿಕ್ಕಿದೆ.
ಹೌದು, ಅಮೆರಿಕ ನೌಕಾ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ರೂಢಿ ಆರ್ಮ್ಸ್ಟ್ರಾಂಗ್ ಅವರಿಗೆ ಕೆಲ ದಿನಗಳ ಹಿಂದಷ್ಟೇ ಪಾರ್ಶ್ವವಾಯು ಆಗಿದೆ. ಆದರೆ ಈ ಸಮಯದಲ್ಲಿ ಅವರೊಂದಿಗೆ ಇದ್ದದ್ದು ಅವರ ಶ್ವಾನ ಮಾತ್ರ. ತನ್ನ ಮಾಲೀಕನಿಗೆ ಆರೋಗ್ಯದಲ್ಲಿ ಏರುಪೇರಾಗಿರುವುದು ತಿಳಿಯುತ್ತಿದ್ದಂತೆ, ಮನೆಯಾಚೆ ಇದ್ದವರಿಗೆ ವಿಷಯ ಮುಟ್ಟಿಸಿದೆ. ಅಲ್ಲಿನ ಸಿಬ್ಬಂದಿಗಳು ಆಂಬ್ಯುಲೆನ್ಸ್ಗೆ ಕರೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದೀಗ 86 ವರ್ಷದ ರೂಢಿ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಲ್ಲಿ ತನ್ನ ನಾಯಿ ಬೂಹು ಅನ್ನು ನೋಡಬೇಕು ಎಂದಿದ್ದಾರೆ. ಇದಕ್ಕೆ ಆಸ್ಪತ್ರೆ ಸಿಬ್ಬಂದಿಗಳು ಸ್ಪಂದಿಸಿದ್ದು, ಶ್ವಾನವನ್ನು ಆಸ್ಪತ್ರೆಗೆ ಬಿಟ್ಟಿದ್ದಾರೆ. ಇದೀಗ ಈ ಇಬ್ಬರ ಭೇಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
https://www.facebook.com/carolinaeasthealth/posts/3134010190022848