ಒಬ್ಬ ವ್ಯಕ್ತಿಯಷ್ಟು ಉದ್ದದ ಪ್ರಿಂಗಲ್ಸ್ ಚಿಪ್ಸ್ ಟ್ಯೂಬ್ ತಯಾರಾಗಿ ದಾಖಲೆ ಬರೆದಿದೆ. 5.3 ಅಡಿ ಉದ್ದದ ಪ್ರಿಂಗಲ್ಸ್ ಚಿಪ್ಸ್ ಪ್ಯಾಕೆಟ್ ಈಗ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಜಪಾನ್ ನ ಆಲೂಗಡ್ಡೆ ಚಿಪ್ಸ್ ಕಂಪನಿಯ ವಕ್ತಾರರಾದ ಫುವಾಚಾನ್ ಎಂಬುವವರ ಎತ್ತರವನ್ನು ಇದು ಹೊಂದಿದೆ. ನವೆಂಬರ್ 11 ಅನ್ನು ಪ್ರಿಂಗಲ್ಸ್ ಡೇ ಎಂದು ಆಚರಿಸಿದ್ದು, ಅಂದೇ ಇದನ್ನು ಬಿಡುಗಡೆಗೊಳಿಸಲಾಗಿದೆ.
ಪ್ರಿಂಗಲ್ಸ್ ಚಿಪ್ಸ್ ಬಗ್ಗೆ ಹಲವರಿಗೆ ಗೊತ್ತೇ ಇದೆ. ಪ್ರಿಂಗಲ್ಸ್ ಎಂಬುದು ಅಮೆರಿಕನ್ ಬ್ರ್ಯಾಂಡ್ ಆಗಿದೆ. ಮೂಲತಃ ಪ್ರಾಕ್ಟಲ್ ಆಂಡ್ ಗ್ಯಾಂಬಲ್ (P&G) 1967ರಲ್ಲಿ ಈ ಆಲೂಗಡ್ಡೆ ಚಿಪ್ಸ್ ಕಂಪನಿಯನ್ನು ಸ್ಥಾಪಿಸಿತು. ಬಳಿಕ ಇದನ್ನು ಪ್ರಿಂಗಲ್ಸ್ ನ್ಯೂಫ್ಯಾಂಗಲ್ಡ್ ಆಲೂಗಡ್ಡೆ ಚಿಪ್ಸ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಯಿತು. ಹಾಲಿ ಇದನ್ನು ಕೆಲ್ಲಾಗ್ಸ್ ಗೆ ಮಾರಾಟ ಮಾಡಲಾಗಿದೆ.
ಉದ್ದನೆಯ ಟ್ಯೂಬ್ ನಲ್ಲಿರುವ ಪ್ರಿಂಗಲ್ಸ್ ಗ್ರಾಹಕರ ಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ. ಇದನ್ನು ಬಹುಬೇಗ ತಿಂದು ಮುಗಿಸಿಬಿಡಲಾಗುತ್ತದೆ. ಇನ್ನೂ ಹೆಚ್ಚಿಗೆ ಬೇಕು ಎಂಬ ಬೇಡಿಕೆ ಗ್ರಾಹಕರಿಂದ ಬರುತ್ತಲೇ ಇದೆ. ಅಲ್ಲದೆ, ಅತಿ ಉದ್ದದ ಪ್ರಿಂಗಲ್ಸ್ ಅನ್ನು ತಯಾರಿಸಬೇಕು ಎಂಬ ಕನಸನ್ನು ಕಂಪನಿ ಈಗ ಯಶಸ್ವಿಗೊಳಿಸಿದೆ.