
ವಿದೇಶಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರನ್ನು ಖುಷಿಯಾಗಿಡಲು ಏನೆನೆಲ್ಲಾ ಆಕರ್ಷಣೆಗಳನ್ನು ಮಾಡುತ್ತಾರೆ ಗೊತ್ತೆ ?
ಮತ್ಸ್ಯಾಗಾರದಲ್ಲಿ ಹೋಟೆಲ್ ನಿರ್ಮಿಸುವುದು, ನೀರಿನಲ್ಲಿ ಮೀನು ಬಿಟ್ಟು ಗ್ರಾಹಕರಿಗೆ ಕಚಗುಳಿ ಕೊಡಿಸುವುದು, ಪಳಗಿದ ಪ್ರಾಣಿ-ಪಕ್ಷಿಗಳನ್ನು ಸಾಕಿಕೊಳ್ಳುವುದು……ಹೀಗೆ.
ಇದೀಗ ಮಾಸ್ಕೋದ ಪ್ರತಿಷ್ಠಿತ ಔಲ್ ಕೆಫೆ ಹೋಟೆಲ್ ನಲ್ಲಿ ಗೂಬೆಗಳನ್ನು ಸಾಕಲಾಗಿದೆ. ಹೋಟೆಲ್ ಗೆ ಬಂದ ಗ್ರಾಹಕರನ್ನು ಮುದ್ದಾದ ಗೂಬೆಗಳು ಸ್ವಾಗತಿಸುತ್ತವೆ. ನಿಮ್ಮ ಪಕ್ಕದಲ್ಲೇ ಬಂದು ವಿರಾಜಮಾನವಾಗುತ್ತವೆ.
ಗ್ರಾಹಕರಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಮುದ್ದಾದ ಗೂಬೆಗಳನ್ನು ಆಟ ಆಡಿಸುತ್ತಾ ಊಟೋಪಚಾರ ಮುಗಿಸಿ ಖುಷಿಯಿಂದ ಮರಳುತ್ತಾರೆ. ರಷ್ಯಾ ಬಿಯಾಂಡ್ ಟ್ವಿಟ್ಟರ್ ಪೇಜ್ ನಲ್ಲಿ ರೆಸ್ಟೋರೆಂಟ್ ನ ವಿಡಿಯೋ ಪೋಸ್ಟ್ ಆಗಿದ್ದು, ವಿನೂತನ ಆಕರ್ಷಣೆಗೆ ನೆಟ್ಟಿಗರೂ ಫಿದಾ ಆಗಿದ್ದಾರೆ.