alex Certify ನ್ಯೂಯಾರ್ಕ್ ಈ ಬೀದಿಯ ಹೆಸರು ’ಪಂಜಾಬಿ ಅವೆನ್ಯು’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯೂಯಾರ್ಕ್ ಈ ಬೀದಿಯ ಹೆಸರು ’ಪಂಜಾಬಿ ಅವೆನ್ಯು’

ನ್ಯೂಯಾರ್ಕ್‌ನ ಕ್ವೀನ್ಸ್‌ ಪ್ರದೇಶದ ಬೀದಿಯೊಂದಕ್ಕೆ ಪಂಜಾಬಿ ಸಮುದಾಯದ ಹೆಸರನ್ನು ಸಹಭಾಗವಾಗಿ ಇಡಲಾಗಿದೆ. ನ್ಯೂಯಾರ್ಕ್ ರಾಜ್ಯಕ್ಕೆ ಸಿಖ್ಖರು ಕೊಟ್ಟಿರುವ ಕೊಡುಗೆಯ ಗೌರವಾರ್ಥ ಈ ನಾಮಕರಣ ಮಾಡಲಾಗಿದೆ.

111 ಸ್ಟ್ರೀಟ್‌ ಅನ್ನು 123 ಸ್ಟ್ರೀಟ್‌ಗೆ ಸಂಪರ್ಕಿಸುವ 101 ಅವೆನ್ಯುವನ್ನು ’ಪಂಜಾಬ್ ಅವೆನ್ಯು’ ಎಂದು ಮರುನಾಮಕರಣ ಮಾಡಲಾಗಿದೆ. ಅಕ್ಟೋಬರ್‌ 23ರಂದು ನಾಮಕರಣ ಸಮಾರಂಭ ಇಟ್ಟುಕೊಳ್ಳಲಾಗಿತ್ತು .

ಕೌನ್ಸಿಲ್ ಸದಸ್ಯೆ ಅಡ್ರಿಯಾನ್ನೆ ವಿಲಿಯಮ್ಸ್‌ ಈ ಬೀದಿಗೆ ಮರುನಾಮಕರಣ ಮಾಡುವ ಸಂಬಂಧ ಶಾಸನಾತ್ಮಕ ಕ್ರಿಯೆಗಳಿಗೆ ಮುಂದಡಿ ಇಟ್ಟಿದ್ದರು. ಸಮಾರಂಭದ ವೇಳೆ ಸಿಖ್ ಸಾಂಸ್ಕೃತಿಕ ಸಮಿತಿಯ ಸದಸ್ಯರು ಹಾಜರಿದ್ದರು.

ಕ್ವೀನ್ಸ್‌ನ ರಿಚ್ಮಂಡ್ ಹಿಲ್ ಪ್ರದೇಶದಲ್ಲಿರುವ ಈ ಬೀದಿಯಲ್ಲಿ ಪಂಜಾಬಿ ಸಮುದಾಯ ಪ್ರಬಲವಾಗಿದ್ದು, ಎರಡು ದೊಡ್ಡ ಗುರುದ್ವಾರಗಳು ಇಲ್ಲಿದೆ. ಪಂಜಾಬಿಗಳು ದೊಡ್ಡ ಮಟ್ಟದಲ್ಲಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...