
ಕೊರೊನಾ ಸಾಂಕ್ರಾಮಿಕ ರೋಗದಿಂದ ಏಳು ತಿಂಗಳ ಕಾಲ ಸ್ಥಗಿತಗೊಂಡಿದ್ದ ಶಾಲೆಗಳು ಇರಾನ್ ನಲ್ಲಿ ಈಗ ಪುನರಾರಂಭಗೊಂಡಿದೆ. ಆದರೆ ಮಕ್ಕಳ ಸ್ಥಿತಿ ಮಾತ್ರ ಅಯೋಮಯ. ಶಾಲೆಯೊಂದರ ತರಗತಿಯಲ್ಲಿ ವಿಚಿತ್ರ ಸ್ಥಿತಿಯಲ್ಲಿ ಮಕ್ಕಳು ಪಾಠ ಕೇಳುವ ಫೋಟೋ ಒಂದು ವೈರಲ್ ಆಗಿದೆ.
ಪಾರದರ್ಶಕ ಡೇರೆಯೊಳಗೆ ಕುಳಿತಿರುವ ಮಕ್ಕಳು ಶಿಕ್ಷಕರ ಪಾಠವನ್ನು ಆಲಿಸುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ. ಸೊಳ್ಳೆಪರದೆ ಮಾದರಿಯ ಪಾರದರ್ಶಕ ಡೇರೆಗಳು ಕೋವಿಡ್ ನಿಂದ ರಕ್ಷಣೆ ಪಡೆಯಲು ಸಿದ್ಧಪಡಿಸಿದ ಹಾಗಿದೆ.
ಈ ಫೋಟೋವನ್ನು ನೋಡಿದ ಅನೇಕರು ಹೊಸ ಆವಿಷ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ರೀತಿ ಮುಚ್ಚಿದ ಡೇರೆಯೊಳಗೆ ಮಕ್ಕಳು ಕುಳಿತರೆ ಆಗುವ ಆರೋಗ್ಯದ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.