ಕಾಶ್ಮೀರದಲ್ಲಿ ಮೊದಲ ಬಾರಿಗೆ ನಿರ್ಮಾಣವಾಯ್ತು ವಿಶೇಷ ವಿನ್ಯಾಸದ ಇಗ್ಲೂ ಕೆಫೆ…! 25-01-2021 11:59AM IST / No Comments / Posted In: Latest News, International ಗುಲ್ಮಾರ್ಗ್ನಲ್ಲಿ ಖಾಸಗಿ ಹೋಟೆಲ್ ಮಾಲೀಕರೊಬ್ಬರು ಕಾಶ್ಮೀರದ ಮೊದಲ ಇಗ್ಲೂ ಕೆಫೆಯನ್ನ ಆರಂಭಿಸಿದ್ದಾರೆ. ಈ ಇಗ್ಲೂ ಕೆಫೆ 22 ಅಡಿ ಅಗಲ ಹಾಗೂ 13 ಅಡಿ ಎತ್ತರವನ್ನ ಹೊಂದಿದೆ. ಈ ಇಗ್ಲೂ ಕೆಫೆಯ ಒಳಗೆ 16 ಮಂದಿ ಇರಬಹುದಾಗಿದೆ. ಈ ವಿಚಾರವಾಗಿ ಮಾತನಾಡಿದ ಇಗ್ಲೂ ಕೆಫೆ ಮಾಲೀಕ ವಾಸೀಮ್ ಶಾ, ಇಗ್ಲೂ ಕೆಫೆ ಪ್ರವಾಸಿಗರನ್ನ ಆಕರ್ಷಿಸೋದ್ರಲ್ಲಿ ಸಂದೇಹವೇ ಇಲ್ಲ. ಶ್ರೀನಗರದಲ್ಲಿರುವ ನನ್ನ ನಿವಾಸದ ಬಳಿಕ ನಾನು ಸುಮ್ಮನೇ ಒಂದು ಇಗ್ಲೂ ನಿರ್ಮಾಣ ಮಾಡಿದ್ದೆ. ಇದಾದ ಬಳಿಕ ನನಗೆ ಇಗ್ಲೂ ಕೆಫೆ ನಿರ್ಮಾಣ ಮಾಡೋ ಪ್ಲಾನ್ ಬಂತು ಎಂದು ಹೇಳಿದ್ರು. ಅಲ್ಲದೇ ಈ ಇಗ್ಲೂ ಶೀಘ್ರದಲ್ಲೇ ವಿಶ್ವದ ಅತ್ಯಂತ ದೊಡ್ಡ ಇಗ್ಲೂ ಕೆಫೆ ಎಂಬ ದಾಖಲೆಯ ಮೂಲಕ ಲಿಮ್ಕಾ ಬುಕ್ ಸೇರಲಿದೆ ಎಂದು ಹೇಳಿದ್ರು.