ವಾಷಿಂಗ್ಟನ್: ಯೋಜಿತ ರಿಯಾಲಿಟಿ ಶೋ ಒಂದರ ವಿಜೇತರಿಗೆ ಭೂಮಿಯ ಹೊರಗೆ ಎಂದರೆ 10 ದಿನದ ಬಾಹ್ಯಾಕಾಶಯಾನದ ಬಹುಮಾನ ದೊರೆಯಲಿದೆ. ಸ್ಪೇಸ್ ಹೀರೋ ಎಂಬ ರಿಯಾಲಿಟಿ ಶೋ ಇದಾಗಿದ್ದು, 2023 ರಲ್ಲಿ ಪ್ರಾರಂಭವಾಗಲಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಗುರುವಾರ ತಿಳಿಸಲಾಗಿದೆ. ಯಾವುದೇ ಹಿನ್ನೆಲೆ ಇದ್ದವರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಗೆದ್ದವರು ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ ನ ಮಿಷನ್ ಭಾಗವಾಗಿ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ ಎಂದು ತಿಳಿಸಲಾಗಿದೆ.
ಕಂಪನಿ ಈಗ ಪ್ರಾಥಮಿಕ ಹಂಚಿಕೆ ಪಾಲುದಾರರು, ಅಂತಾರಾಷ್ಟ್ರೀಯ ಬ್ರಾಂಡಿಂಗ್ ಗೆ ಹುಡುಕಾಟ ನಡೆಸಿದೆ. ಬಿಡುಗಡೆಯ ದಿನಾಂಕ, ಸ್ಪರ್ಧೆಯ ಸ್ವರೂಪ, ಫಂಡಿಂಗ್ ಯಾರು ಮಾಡಲಿದ್ದಾರೆ ಎಂಬ ವಿಚಾರಗಳನ್ನು ಈಗ ಬಹಿರಂಗ ಮಾಡುವುದಿಲ್ಲ ಎಂದು ಕಂಪನಿ ತಿಳಿಸಿದೆ. ವಿಜೇತ ಅಭ್ಯರ್ಥಿಗೆ 65 ಮಿಲಿಯನ್ ಡಾಲರ್ ಬಹುಮಾನವನ್ನು ನೀಡಲಾಗುವುದು ಎಂದು ಈ ಪ್ರದರ್ಶನದ ಫಂಡಿಂಗ್ ಪಾರ್ಟನರ್ ಗಳಲ್ಲಿ ಒಂದಾಗಿರುವ ಡಾಬರ್ ಸಾಸ್ ಕಂಪನಿ ತಿಳಿಸಿದೆ.
ಈ ಸ್ಪರ್ಧೆಯ ಸ್ಕ್ರಿಪ್ಟ್ ಸಿದ್ಧವಾಗುತ್ತಿದ್ದು, ಮಾಸ್ಟರ್ ಶೆಫ್, ಫುಡ್ ನೆಟ್ವರ್ಕ್ ಮುಂತಾದ ಶೋಗಳನ್ನು ಪ್ರಸಾರ ಮಾಡಿದ ಫುಡ್ ನೆಟ್ವರ್ಕ್ ಗಳಾದ ಬೆನ್ ಸಿಲ್ವರಾಮ್ , ಹೊವರ್ಡ್ ಒವೆನ್ಸ್ ಅವರ ಜತೆ ಮಾತುಕತೆ ನಡೆದಿದೆ. ಮಾಜಿ ನ್ಯೂಸ್ ಕಾರ್ಪ್ ಎಕ್ಸಿಕ್ಯೂಟಿವ್ ಮಾರ್ಟಿ ಪಾಂಪದೂರ್ ಅವರು ಈ ಶೋ ನೇತೃತ್ವ ವಹಿಸಲಿದ್ದಾರೆ. ಪರಿಭ್ರಮಣೆಯ ಟ್ರಿಪ್ ನ ಸಂಯೋಜನೆಯನ್ನು ನಾಸಾದ ಜತೆಗೆ ಎಕ್ಸಿಮ್ ಕಂಪನಿ ಮಾಡುತ್ತಿದೆ ಎಂದು ವಿವರಿಸಲಾಗಿದೆ.