ದೇಹವನ್ನು ದಂಡಿಸಿ ಕಡೆದಿಟ್ಟ ಶಿಲ್ಪವನ್ನಾಗಿಸಲು ಬೇಕಾದ ಶಿಸ್ತನ್ನು ಮೈಗೂಡಿಸಿಕೊಳ್ಳಲು ಸ್ಪೂರ್ತಿ ತುಂಬಬಲ್ಲ ಪುಟಾಣಿಯೊಬ್ಬನ ವರ್ಕ್‌ಔಟ್ ವಿಡಿಯೋ ವೈರಲ್ ಆಗುತ್ತಿದೆ.
ಚೇಸ್ ಇಂಗ್ರಹಾಮ್ ಹೆಸರಿನ ಟ್ರೇನರ್ ಒಬ್ಬರು ತಮ್ಮ ಪುಟಾಣಿ ಮಗ ಡೈಲನ್ ಪುಲ್-ಅಪ್ ಹಾಗೂ ಬರ್ಪಿಗಳನ್ನು ಭಾರೀ ಸಲೀಸಾಗಿ ಮಾಡುತ್ತಿರುವ ವಿಡಿಯೋವನ್ನು ಶೇರ್‌ಮಾಡಿದ್ದಾರೆ. ಈ ಪುಟಾಣಿ ಇವೆಲ್ಲವನ್ನೂ ಯಾವುದೇ ನೆರವಿಲ್ಲದೇ ಮಾಡುತ್ತಿರುವುದಾಗಿ ಇಂಗ್ರಹಾಮ್ ತಿಳಿಸಿದ್ದಾರೆ.
ಬಾಲಕನ ಈ ವರ್ಕ್‌ಔಟ್ ಅನ್ನು ಕ್ರಾಸ್‌ಫೈರ್ ಟ್ರೇನಿಂಗ್ ಎಂದು ಕರೆಯಲಾಗಿದೆ. ನೀವೂ ಸಹ ಇದನ್ನು ಒಮ್ಮೆ ನೋಡಿ ಖುಷಿ ಪಡಿ.