ಹನೋಯಿ: ನಮ್ಮಲ್ಲಿ ದೇವಸ್ಥಾನಗಳ ಬಾಗಿಲಿಗೆ, ಗೋಡೆಗೆ ಬಂಗಾರದ ತಗಡು ಹೊಡೆಯುವುದನ್ನು ನೋಡಿದ್ದೇವೆ. ಹಿಂದಿನ ಕಾಲದಲ್ಲಿ ರಾಜರು, ಈಗಿನ ಆಗರ್ಭ ಶ್ರೀಮಂತರು ಮನೆಯಲ್ಲಿ ಬಂಗಾರದ ತಟ್ಟೆ ಇಟ್ಟು ಊಟ ಮಾಡುತ್ತಾರೆ. ಮನೆಯ ಆವರಣಕ್ಕೆ ಬಂಗಾರದ ಲೇಪ ಮಾಡಿಸುವುದು ಕೇಳಿದ್ದೇವೆ. ಆದರೆ, ಸಾಮಾನ್ಯ ಶ್ರೀಮಂತ ವರ್ಗದವರಿಗೆ ಇದೆಲ್ಲ ಕನಸು ಮಾತ್ರ.
ಆದರೆ, ಇಲ್ಲೊಂದು ಬಂಗಾರದ ಮನೆಯಲ್ಲಿ ನಾವೂ ಉಳಿಯಬಹುದು.
ಹೌದು, ವಿಯೆಟ್ನಾಂನಲ್ಲಿ 24 ಕ್ಯಾರೆಟ್ ಬಂಗಾರದ ಲೇಪವುಳ್ಳ ಕಟ್ಟಡವೊಂದಿದೆ. ಇಲ್ಲಿನ ಗೋಡೆ, ಟಿಪಾಯಿ, ಬಾತ್ ಟಬ್, ಕನ್ನಡಿ ಕಟ್ಟು ಎಲ್ಲವೂ ಬಂಗಾರ……!
ಈ ಕನಸನ್ನು ನನಸು ಮಾಡಬೇಕೆಂದರೆ ಒಮ್ಮೆ ವಿಯೆಟ್ನಾಂಗೆ ಹೋಗಿ ಬನ್ನಿ. ಗೋಲ್ಡನ್ ಪಿಂಚ್, ಗೋಲ್ಡನ್ ಟುಲಿಪ್ ಹೀಗೆ ಬಂಗಾರದ ಹೆಸರಿರುವ ಹಲವು ಹೋಟೆಲ್‌ಗಳು ವಿಶ್ವದಾದ್ಯಂತ ಇವೆ. ಆದರೆ, ಈ ಹೋಟೆಲ್‌ನ ಹೆಸರು ಮಾತ್ರ ಬಂಗಾರವಲ್ಲ ನಿಜವಾಗಿಯೂ ಎಲ್ಲೆಡೆ ಬಂಗಾರವೇ ಇದೆ. ವಿಯೆಟ್ನಾಂನ ಹನೋಯಿನಲ್ಲಿರುವ ಡೊಲೆಕ್ ಹನೋಯಿ ಗೋಲ್ಡನ್ ಲೇಕ್ ಹೋಟೆಲ್‌ನಲ್ಲಿ ಅಂಥ ಅಪರೂಪವಿದೆ.
ನಾಗುಯೆನ್ ಹು ಡೌಂಗ್ ಎಂಬುವವರು ಚೇರ್‌ಮನ್ ಆಗಿರುವ ಹುವಾ ಬಿನ್ಹ ಗ್ರೂಪ್‌ಗೆ ಸೇರಿದ ಹೋಟೆಲ್ ಇದಾಗಿದ್ದು, ಬಾತ್‌ರೂಂ ನಿಂದ ಹಿಡಿದು ಸ್ವಿಮ್ಮಿಂಗ್ ಫೂಲ್‌ನ ಟೈಲ್ಸ್‌ವರೆಗೆ ಎಲ್ಲವೂ 24 ಕ್ಯಾರೆಟ್ ಬಂಗಾರದಿಂದ ಲೇಪಿತವಾಗಿವೆ. ಅಷ್ಟೇ ಏಕೆ ಹೋಟೆಲ್‌ನ ಹೊರಗಿನ ಗೋಡೆಯೂ ಸಹ ಬಂಗಾರದ ತಗಡು ಹೊಡೆಯಲಾಗಿದೆ. ಪ್ರತಿ ರೂಂನ ಬಾಡಿಗೆ 250 ಅಮೆರಿಕನ್ ಡಾಲರ್ ಅಂದರೆ 18,661 ರೂ. ಆಗಿದೆ.
https://www.instagram.com/p/B3dmM0PhZ2g/?utm_source=ig_embed
https://www.instagram.com/p/B3EjGIqBZBK/?utm_source=ig_embed