ಅನಗತ್ಯವಾಗಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡ್ತಿದ್ದ ವೈದ್ಯನಿಗೆ ಶಿಕ್ಷೆಯಾಗಿದೆ. ಕೋರ್ಟ್ 465 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಘಟನೆ ನಡೆದಿರೋದು ಅಮೆರಿಕಾದ ವರ್ಜೀನಿಯಾದಲ್ಲಿ. ಡಾ. ಜಾವೇದ್ ಪರ್ವೇಜ್ ಗೆ ಕೋರ್ಟ್ ಶಿಕ್ಷೆ ವಿಧಿಸಿದೆ.
ಡಾ. ಜಾವೇದ್ ಪರ್ವೇಜ್, ಶಸ್ತ್ರ ಚಿಕಿತ್ಸೆ ಅಗತ್ಯವಿಲ್ಲದ ಮಹಿಳೆಯರನ್ನು ಬೆದರಿಸಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡ್ತಿದ್ದನಂತೆ. ಖಾಸಗಿ ಹಾಗೂ ಸರ್ಕಾರಿ ವಿಮೆ ಕಂಪನಿಗಳಲ್ಲಿ ಕೋಟ್ಯಾಂತರ ರೂಪಾಯಿ ಬಿಲ್ ತೋರಿಸಿ ಸಾಕಷ್ಟು ಗಳಿಕೆ ಮಾಡಿದ್ದಾನೆ ಎನ್ನಲಾಗಿದೆ. 2010ರ ನಂತ್ರ ಆತನ ಗಳಿಕೆಯಲ್ಲಿ ವೇಗ ಕಂಡು ಬಂದಿತ್ತು.
ಗರ್ಭಿಣಿಯರ ಸಾಮಾನ್ಯ ಹೆರಿಗೆಗೆ ಕಾಯದೆ ಆಪರೇಷನ್ ಮಾಡಿಸುತ್ತಿದ್ದ ಎನ್ನಲಾಗಿದೆ. ಕ್ಯಾನ್ಸರ್ ತಪ್ಪಿಸಲು ಶಸ್ತ್ರಚಿಕಿತ್ಸೆ ಅನಿವಾರ್ಯವೆಂದು ಜನರಿಗೆ ಸಲಹೆ ನೀಡುತ್ತಿದ್ದನಂತೆ. ಈತನ ಕೆಲಸದಿಂದ ವಿಮೆ ಕಂಪನಿಗಳಿಗೆ ಸಾಕಷ್ಟು ನಷ್ಟವಾಗಿದೆ ಎಂದು ಕೋರ್ಟ್ ಮುಂದೆ ಹೇಳಲಾಗಿತ್ತು. ವೈದ್ಯರ ತಪ್ಪು ಸಾಭೀತಾದ ಹಿನ್ನಲೆಯಲ್ಲಿ ಕೋರ್ಟ್ ಶಿಕ್ಷೆ ವಿಧಿಸಿದೆ.