ಪೋಕಿಮನ್ ಕಾರ್ಡ್‌ಗಳ ಸಂಗ್ರಹ ಬಹುತೇಕ ಮಂದಿಗೆ ಬಾಲ್ಯದ ಫೇವರಿಟ್ ಹವ್ಯಾಸಗಳಲ್ಲಿ ಒಂದಾಗಿತ್ತೆಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಜಪಾನೀಸ್ ಫ್ರಾಂಚೈಸಿಯ ಈ ಕಾಲ್ಪನಿಕ ಪಾತ್ರಗಳಿಗೆ ಕಳೆದ 25 ವರ್ಷಗಳಿಂದ ಭಾರೀ ಫಾಲೋಯಿಂಗ್ ಇದೆ.
30 ವರ್ಷದ ಗೀತರಚಕಾರರೊಬ್ಬರು ಇಂಥ ಒಂದು ಪೋಕಿಮನ್ ಕಾರ್ಡ್‌ಗೆ 226,000 ಡಾಲರುಗಳನ್ನು ವ್ಯಯಿಸಿದ್ದಾರೆ. ಪೋಕಿಮನ್ ನ ಮೊದಲ ಆವೃತ್ತಿಯಾದ ಚಾರಿಝಾರ್ಡ್ ಕಾರ್ಡ್ ಆದ ಇದಕ್ಕೆ ಇಷ್ಟೆಲ್ಲಾ ಡಿಮ್ಯಾಂಡ್ ಇದೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 9ರಂದು ಹರಾಜಿಗೆ ಈ ಕಾರ್ಡನ್ನು ಇಡಲಾಗಿತ್ತು. ನೋಡನೋಡುತ್ತಿದ್ದಂತೆ, ಕೆಲವೇ ನಿಮಿಷಗಳಲ್ಲಿ ಸಾವಿರಾರು ಡಾಲರ್‌ಗಳ ಲೆಕ್ಕದಲ್ಲಿ ಹರಾಜು ಮೊತ್ತ ಏರುತ್ತಲೇ ಸಾಗಿತು. ಕೊನೆಗೆ ಲಾಜಿಕ್ ಹೆಸರಿನ ಈ ಕಾರ್ಡ್ ಮಾಜಿ ರ‍್ಯಾಪರ್‌ಗೆ ಸಂದಿದೆ.