ಮದ್ಯಪಾನ ಆರೋಗ್ಯ ಪೂರಕ- ಮಾರಕ ಎನ್ನುವ ಬಗ್ಗೆ ಶತಮಾನದಿಂದ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಈ ಚರ್ಚೆಗೆ ಇನ್ನಷ್ಟು ಪೂರಕ ಅಂಶವನ್ನು ನೂತನ ಸಂಶೋಧನೆ ಬಹಿರಂಗಗೊಳಿಸಿದೆ.
ಹೌದು, ಅಮೆರಿಕನ್ ಮೆಡಿಕಲ್ ಫೈಂಡ್ಸ್ ಜರ್ನಲ್‌ನಲ್ಲಿ ಈ ಸಂಶೋಧನೆ ಬಹಿರಂಗಗೊಂಡಿದ್ದು, ನಿಗದಿತ ಅವಧಿಯಲ್ಲಿ ಒಂದೆರೆಡು ಪೆಗ್ ಮದ್ಯ ಸೇವನೆಯಿಂದ ಮೆದುಳಿನ ಅರಿವಿನ ಭಾಗ, ವಯಸ್ಸಾದ ಬಳಿಕ ಉತ್ತಮ ರೀತಿಯಲ್ಲಿ ಇರುತ್ತದೆ ಎಂದು ಹೇಳಲಾಗಿದೆ.
ಸುಮಾರು 19,887 ಮಂದಿಯ ಮಾದರಿಯನ್ನಿಟ್ಟುಕೊಂಡು ದಶಕದ ಕಾಲ ಸಂಶೋಧನೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ವಯಸ್ಸಾದ ಬಳಿಕ, ಎಂದೂ ಮದ್ಯ ಸೇವಿಸದ, ಕೆಲವೊಮ್ಮೆ ಸೇವಿಸುವ ಹಾಗೂ ನಿಗದಿತ ಸಮಯದಲ್ಲಿ ಮದ್ಯ ಸೇವಿಸುವವರ ಗುಂಪನ್ನು ನೋಡಿದಾಗ, ನಿಗದಿತ ಮದ್ಯ ಸೇವಿಸುವವರ ಮೆದುಳು ಹೆಚ್ಚು ಆಕ್ವೀವ್ ಆಗಿರುವುದು ಕಂಡುಬಂದಿದೆ.