ಭೂಮಿಯನ್ನು ಸಂರಕ್ಷಿಸುವ ಪದರದಲ್ಲಿ ಕಾಣಿಸಿಕೊಂಡಿರುವ ಕುಳಿ ಮುಂದಿನ ದಿನಗಳಲ್ಲಿ ಎರಡು ದುರ್ಬಲ ಮ್ಯಾಗ್ನೆಟಿಕ್ ವಲಯಗಳಾಗಿ ಹೋಳಾಗುವ ಸಾಧ್ಯತೆ ಇದೆ ಎಂದು ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಎಚ್ಚರಿಸಿದೆ.
ದಕ್ಷಿಣ ಅಮೆರಿಕಾ ಹಾಗೂ ದಕ್ಷಿಣ ಅಟ್ಲಾಂಟಿಕ್ ಸಮುದ್ರದ ಮಧ್ಯೆ ಈ ಕುಳಿಯಿದ್ದು, ಇದರ ಗಾತ್ರ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದು ಮುಂಬರುವ ವರ್ಷಗಳಲ್ಲಿ ಎರಡು ಹೋಳಾಗುವ ಕಾರಣ ಬಾಹ್ಯಾಕಾಶದಲ್ಲಿ ಇರುವ ಉಪಗ್ರಹಗಳ ಮೇಲೆ ಪರಿಣಾಮ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಈ ಕುಳಿ ಹೋಳಾದ ಸಂದರ್ಭದಲ್ಲಿ ಎರಡು ದುರ್ಬಲ ಮ್ಯಾಗ್ನೆಟಿಕ್ ಫೀಲ್ಡ್ ಆಗಲಿದ್ದು, ಇದು ಉಪಗ್ರಹಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಬಾಹ್ಯಾಕಾಶದಿಂದ ಭೂಮಿಯಲ್ಲಿನ ಮಹತ್ವದ ಸಂಗತಿಗಳ ಕುರಿತು ಮಾಹಿತಿ ನೀಡುತ್ತಿರುವ ಉಪಗ್ರಹಗಳ ಕಾರ್ಯಕ್ಕೆ ಅಡಚಣೆಯಾಗಲಿದೆ ಎನ್ನಲಾಗಿದೆ.
ಕಳೆದ 200 ವರ್ಷಗಳಲ್ಲಿ ಈ ಕುಳಿ ಶೇ.9 ರಷ್ಟು ದುರ್ಬಲವಾಗಿದ್ದು, ಆದರೆ 1971 ರಿಂದಿಚೇಗೆ ಇದು ವೇಗ ಪಡೆದುಕೊಂಡಿದೆ ಎನ್ನಲಾಗಿದೆ. ಈ ಅವಧಿಯಲ್ಲಿ ಕುಳಿಯ ವಿಸ್ತಾರ ಶೇ.8 ರಷ್ಟು ಹಿಗ್ಗಿದೆ ಎನ್ನಲಾಗಿದೆ. ನಾಸಾ ವಿಜ್ಞಾನಿಗಳು ಈ ಬೆಳವಣಿಗೆಯನ್ನು ನಿಕಟವಾಗಿ ಗಮನಿಸುತ್ತಿದ್ದು, ESA ವಿಜ್ಞಾನಿಗಳು ಸಹ ಇದೇ ಕಾರ್ಯದಲ್ಲಿ ತೊಡಗಿದ್ದಾರೆ.