alex Certify ಮಾಂಸ ಕತ್ತರಿಸುವ ಕತ್ತಿಯಿಂದ ತಲೆ ಕೂದಲಿಗೆ ಕತ್ತರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಂಸ ಕತ್ತರಿಸುವ ಕತ್ತಿಯಿಂದ ತಲೆ ಕೂದಲಿಗೆ ಕತ್ತರಿ….!

ಲಾಹೋರ್‌ನ ಕ್ಷೌರಿಕ ಅಲಿ ಅಬ್ಬಾಸ್ ಎಂಬಾತ ಈಗ ತನ್ನ ಅಪರಿಮಿತ ಕೌಶಲದಿಂದ ಸುದ್ದಿಯಾಗಿದ್ದಾನೆ‌. ಆತ ಮಾಡಿದ್ದೇನೆಂದರೆ, ಗ್ರಾಹಕನ ತಲೆ ಕೂದಲನ್ನು ಕತ್ತರಿಯಿಂದ ಕತ್ತರಿಸುವ ಬದಲು ಮಾಂಸ ಕತ್ತರಿಸುವ ಕತ್ತರಿ ಬಳಸುತ್ತಿದ್ದಾನೆ.

ಗ್ರಾಹಕರನ್ನು ಆಕರ್ಷಿಸಲು ನಾನು ಬೇರೆ ಏನನ್ನಾದರೂ ಪ್ರಯೋಗ ಮಾಡಬೇಕೆಂದು ಭಾವಿಸಿ ಈ ರೀತಿ ಮಾಡಿದೆ. ಆರಂಭದಲ್ಲಿ, ಕೃತಕ ಕೂದಲಿನ ಮೇಲೆ ಪ್ರಯತ್ನಿಸಿದೆ. ಸ್ವಲ್ಪ ಸಮಯದವರೆಗೆ ಅದನ್ನು ಅಭ್ಯಾಸ ಮಾಡಿದ ನಂತರ ಗ್ರಾಹಕರ ಮೇಲೆ ಬಳಸಿದ್ದೇನೆ. ಅವರು ಅದನ್ನು ತುಂಬಾ ಇಷ್ಟಪಡುತ್ತಿದ್ದಾರೆ ಎಂದು ಅಬ್ಬಾಸ್ ಹೇಳಿಕೊಂಡಿದ್ದಾನೆ.

ಶಾಕಿಂಗ್​: ಮೈಸೂರಿನಲ್ಲಿಯೂ ಪತ್ತೆಯಾಯ್ತು ಮಾರಕ ಬ್ಲಾಕ್​ ಫಂಗಸ್​….!

ಮೊದಲು ಈ ಪ್ರಯತ್ನ ಮಾಡಿದಾಗ ಅನೇಕ ಗ್ರಾಹಕರು ಭಯವನ್ನು ವ್ಯಕ್ತಪಡಿಸಿ, ಸಲೂನ್‌ನಿಂದ ದೂರ ಉಳಿದುಬಿಟ್ಟಿದ್ದರಂತೆ. ಆದರೆ ಈಗ ಅಬ್ಬಾಸ್ ಫ್ಯಾಶನ್ ಖ್ಯಾತವಾಗಿದೆ. ಆತ ಟಿವಿ ಕಾರ್ಯಕ್ರಮಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

ಮಾಂಸ ಕತ್ತರಿಸುವ ಕತ್ತಿ, ಸುತ್ತಿಗೆ, ದೊಡ್ಡ ಚಾಕು ಹೀಗೆ ಬೇರೆಬೇರೆ ಸಾಧನವನ್ನು ಬಳಸುತ್ತಾನೆ.‌ ಈ ರೀತಿ ಕಟಿಂಗ್ ಮಾಡುವುದಕ್ಕೆ 2000 ರೂ. ಮತ್ತು ಕತ್ತರಿ ಬಳಸಿ ಹೇರ್ ಕಟ್ ಮಾಡಿದರೆ 1,000 ರೂ. ಚಾರ್ಜ್ ಮಾಡುತ್ತಾರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...