ಥ್ಯಾಂಕ್ಸ್ ಗಿವಿಂಗ್ ಸಂದರ್ಭದಲ್ಲಿ ಡಜನ್‌ಗಟ್ಟಲೇ ನಿರುದ್ಯೋಗಿ ನಿವಾಸಿಗಳಿಗೆ ಟರ್ಕಿ ಕೊಟ್ಟ ಶೆರಿನಾ ಜೋನ್ಸ್‌ಗೆ ತಾನು ಪೂರೈಸಿದ ಉಚಿತ ಫ್ರಿಡ್ಜ್ ಕಾಣೆಯಾಗಿದೆ ಎಂಬ ಸುದ್ದಿ ಕಿವಿಗೆ ಬಿದ್ದಿದೆ.
ಮಿಯಾಮಿಯ ಏರಿಯಾವೊಂದರಲ್ಲಿ ವಾಸಿಸುವ ನಿರುದ್ಯೋಗಿ ಮಂದಿಗೆ ಅನ್ನಾಹಾರ ಪೂರೈಸಲೆಂದು ಶೆರಿನಾ ಫ್ರಿಡ್ಜ್ ಒಂದನ್ನು ಇಟ್ಟಿದ್ದರು. ಕೋವಿಡ್ ಸೋಂಕಿನಿಂದ ಉಂಟಾದ ಲಾಕ್‌ಡೌನ್ ಅವಧಿಯಲ್ಲಿ ತನ್ನ ಬ್ಯೂಟಿ ಸಲೂನ್ ಅನ್ನು ಮುಚ್ಚಲಾದ ಬಳಿಕ ಹಸಿದ ಮಂದಿಗೆ ಊಟ ಕೊಡಲೆಂದು ಈ ಫ್ರಿಡ್ಜ್ ಇಡಲಾಗಿತ್ತು.
ಕ್ಯಾನ್ಸರ್ ವಿರುದ್ಧ ಜೀವನಯುದ್ಧದಲ್ಲಿ ಗೆದ್ದು ಬಂದ 36 ವರ್ಷದ ಶೆರಿನಾ ತಮ್ಮ ಅಲ್ಪ ಉಳಿತಾಯವನ್ನು ಬಳಸಿಕೊಂಡು ಇದೇ ಆಗಸ್ಟ್‌ನಲ್ಲಿ ಸಾಮುದಾಯಿಕ ಫ್ರಿಡ್ಜ್ ಒಂದನ್ನು ಕೊಂಡಿದ್ದರು. ಆನ್ಲೈನ್ ಮೂಲಕ ಹಣ ಸಂಗ್ರಹ ಮಾಡಿಕೊಂಡು ಮೂರು ಫ್ರಿಡ್ಜ್‌ಗಳನ್ನು ಖರೀದಿ ಮಾಡಿದ ಶೆರಿನಾ ಎಲ್ಲರ ಪಾಲಿನ ಡಾರ್ಲಿಂಗ್ ಆಗಿದ್ದರು.
ಇವುಗಳಲ್ಲಿ ಒಂದು ಫ್ರಿಡ್ಜ್ ನಾಪತ್ತೆಯಾಗಿದ್ದು, ಜೋನ್ಸ್‌ಗೆ ಭಾರೀ ನೋವುಂಟು ಮಾಡಿತ್ತು.
ಆದರೆ ಶೆರಿನಾ ನೆರವಿಗೆ ನಿಂತ ಈ ಕಮ್ಯೂನಿಟಿಯ ಜನರು ತಮ್ಮ ಕೈಯಲ್ಲಿ ಆದಷ್ಟು ಅಲ್ಪ ಸ್ವಲ್ಪ ನಿಧಿಯನ್ನು ಸಂಗ್ರಹಿಸಿ ಹೊಸ ಫ್ರಿಡ್ಜ್ ತಂದಿಟ್ಟಿದ್ದಾರೆ.