ಸೋಶಿಯಲ್ ಮೀಡಿಯಾದಲ್ಲಿ ವಿಷಯಗಳು ಹರಿದಾಡಿದಷ್ಟು ವೇಗದಲ್ಲಿ ಇನ್ಯಾವ ವೇದಿಕೆಯಲ್ಲೂ ಹರಡೋಕೆ ಸಾಧ್ಯವಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಎಲ್ಲಾ ವಿಚಾರಗಳು ಸತ್ಯ ಅಂತಲೂ ಹೇಳೋಕೆ ಬರಲ್ಲ. ಇದಕ್ಕೆ ಉತ್ತಮ ಉದಾಹರಣೆ ಬ್ರೆಜಿಲ್ ನದಿಯಲ್ಲಿ ಹರಿದಾಡುತ್ತಿದ್ದ 50 ಅಡಿ ಅನಕೊಂಡದ ವಿಡಿಯೋ.
ಬ್ರೆಜಿಲ್ನ ನದಿಯೊಂದರಲ್ಲಿ ಕೆಲದಿನಗಳ ಹಿಂದಷ್ಟೇ 50 ಅಡಿ ಆನಕೊಂಡ ಹಾವು ಕಾಣಿಸಿಕೊಂಡಿದೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾ ತುಂಬೆಲ್ಲ ಹರಿದಾಡಿತ್ತು. ಆದರೆ ಇದರ ಫ್ಯಾಕ್ಟ್ ಚೆಕ್ ವೇಳೆ ಇದು 2018 ಏಪ್ರಿಲ್ ತಿಂಗಳ ವಿಡಿಯೋ ಎಂಬ ಅಂಶ ಬೆಳಕಿಗೆ ಬಂದಿದೆ. ಈ ವಿಡಿಯೋ ನಿನ್ನೆ ಮೊನ್ನೆಯದು ಎಂದುಕೊಂಡಿದ್ದ ಟ್ವೀಟಿಗರು ಕಾಮೆಂಟ್ ಬಾಕ್ಸ್ ತುಂಬಾ ತಮ್ಮ ಭಾವನೆ ಹೊರಹಾಕಿದ್ದರು.
ಅಲ್ಲದೇ ಮೂಲ ವಿಡಿಯೋದಲ್ಲಿ ಆನಕೊಂಡಾ ದೊಡ್ಡದಿದ್ದರೂ ಸಹ ಈಗಿನ ವಿಡಿಯೋದಲ್ಲಿ ಹೇಳಿರುವಂತೆ 50 ಅಡಿ ಅಲ್ಲ. ಬದಲಾಗಿ ಈಗ ಹರಿದಾಡುತ್ತಿರುವ ವಿಡಿಯೋದಲ್ಲಿ ಹಾವಿನ ಉದ್ದವನ್ನು ಸ್ಟ್ರೆಚ್ ಮಾಡಿರುವುದನ್ನು ಗಮನಿಸಬಹುದಾಗಿದೆ.
https://twitter.com/NatureisScary/status/1321877464134553600?ref_src=twsrc%5Etfw%7Ctwcamp%5Etweetembed%7Ctwterm%5E1321877464134553600%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fa-50-foot-anaconda-slithers-through-a-river-in-brazil-in-viral-video-but-is-it-real-3025631.html