ಕೊರೊನಾ ಪತ್ತೆಗಾಗಿ ಕಡಿಮೆ ಪ್ರಮಾಣದ ಪರೀಕ್ಷೆ ನಡೆಯುತ್ತಿದ್ದು, ಸೋಂಕು ಮಾತ್ರ ಶರವೇಗದಲ್ಲಿ ವ್ಯಾಪಿಸುತ್ತಿದೆ. ಇದು ವೈದ್ಯಕೀಯ ಸಿಬ್ಬಂದಿ, ಜನಪ್ರನಿಧಿಗಳಲ್ಲಿ ಚಿಂತೆಗೆ ಕಾರಣವಾಗಿದೆ.
ಹೀಗಾಗಿ ಈ ಸವಾಲನ್ನು ಎದುರಿಸಲು ಅರ್ಹರು ಮುಂದೆ ಬರಬಹುದು ಎಂದು ಘೋಷಿಸಿರುವ ಎಕ್ಸ್ ಪ್ರೈಸ್ ಸಂಸ್ಥೆಯು ಕ್ಷಿಪ್ರ ಪರೀಕ್ಷೆ ನಡೆಸುವ ತಂತ್ರಜ್ಞಾನ ಆವಿಷ್ಕರಿಸುವವರಿಗೆ 5 ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಪ್ರಕಟಿಸಿದೆ.
ಈ ಕುರಿತು ಮಾತನಾಡಿರುವ ಸಂಸ್ಥೆಯ ಸಿಇಒ ಅನೌಶೇಶ್ ಅನ್ಸಾರಿ, ಇಡೀ ಮನುಕುಲವನ್ನು ಕಾಡುತ್ತಿರುವ ಕೊರೊನಾದಿಂದಾಗಿ ಆರ್ಥಿಕತೆಯೂ ಕುಸಿಯುತ್ತಿದೆ. ಈ ಸವಾಲು ಎದುರಿಸಲು ಪರಿಹಾರದ ಹುಡುಕಾಟದಲ್ಲಿ ನಾವಿದ್ದೇವೆ ಎಂದಿದ್ದಾರೆ.
ಇಂತಹ ಆವಿಷ್ಕಾರ ಮಾಡಿದ 68 ದೇಶಗಳ 659 ತಂಡಗಳು ನೋಂದಣಿ ಮಾಡಿಕೊಂಡಿದ್ದು, ಕೊರೋನಾ ಕ್ಷಿಪ್ರ ಪರೀಕ್ಷೆಯು 12 ಡಾಲರ್ ಗಿಂತ ಹೆಚ್ಚು ಖರ್ಚಿನಲ್ಲಿ ಆಗಬಾರದು, ಕೆಲವೇ ನಿಮಿಷ ಅಥವಾ ಗಂಟೆಯಲ್ಲಿ ಖಚಿತ ಫಲಿತಾಂಶ ವರದಿ ಕೊಡುವಂತಿರಬೇಕು. ಈ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೋ ಅವರಿಗೆ 5 ದಶಲಕ್ಷ ಡಾಲರ್ ಬಹುಮಾನ ಸಿಗಲಿದೆ ಎಂದಿದ್ದಾರೆ.