ಕೊರೊನಾ ರೋಗಿ ಆಸ್ಪತ್ರೆಗೆ ಹೋದ್ರೆ ವಾಪಸ್ ಬರುವವರೆಗೂ ಕುಟುಂಬಸ್ಥರು ಆತಂಕದಲ್ಲಿರುತ್ತಾರೆ. ಬ್ರಿಟನ್ ನಲ್ಲಿ ಎರಡು ಬಾರಿ ಸಾವಿನ ವಿರುದ್ಧ ಹೋರಾಡಿದ ರೋಗಿಯೊಬ್ಬರು ಕೊರೊನಾ ಗೆದ್ದು ಬಂದಿದ್ದಾರೆ. ಸತತ 95 ದಿನಗಳ ಕಾಲ ಆಸ್ಪತ್ರೆಯಲ್ಲಿ ಕಾಲ ಕಳೆದಿದ್ದಾರೆ.
ಮೂವರು ಮಕ್ಕಳ ತಂದೆ ಕೀತ್ ವ್ಯಾಟ್ಸನ್ ಮೂರು ತಿಂಗಳಿಗಿಂತ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದರು. ಜೂನ್ 25 ರಂದು ಮನೆಗೆ ವಾಪಸ್ ಆಗಿದ್ದಾರೆ. ದೀರ್ಘ ಚಿಕಿತ್ಸೆಯಿಂದಾಗಿ ಅವರ ತೂಕವು ಗಮನಾರ್ಹವಾಗಿ ಕಡಿಮೆಯಾಗಿದೆ.
ಕೀತ್ ಯುಕೆಯಲ್ಲಿ ದೀರ್ಘ ಕಾಲದವರೆಗೆ ಕೊರೊನಾ ಚಿಕಿತ್ಸೆ ಪಡೆದ ವ್ಯಕ್ತಿಯಾಗಿದ್ದಾರೆ. 52 ವರ್ಷದ ಕೀತ್ ವ್ಯಾಟ್ಸನ್ ಕೋಮಾ ಸ್ಥಿತಿಗೆ ಹೋಗಿದ್ದರು. ಎರಡು ಬಾರಿ ಅವರು ಸಾವನ್ನಪ್ಪಿದ್ದಾರೆಂಬ ವದಂತಿ ಹಬ್ಬಿತ್ತು. ಅವರನ್ನು ಒಂದು ತಿಂಗಳಿಗಿಂತ ಹೆಚ್ಚು ಕಾಲ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಅವರು ಸುಮಾರು 41 ದಿನಗಳ ಕಾಲ ಐಸಿಯುನಲ್ಲಿ ಕಳೆದರು.
ಕೀತ್ ಆಸ್ಪತ್ರೆಗೆ ದಾಖಲಿಸಿದಾಗ ಬ್ರಿಟನ್‌ನಲ್ಲಿ ಕೊರೊನಾದಿಂದ ಕೇವಲ 144 ಸಾವು ಸಂಭವಿಸಿತ್ತು. ಆದರೆ ಅವರು ಹೊರಬಂದಾಗ ಬ್ರಿಟನ್‌ನಲ್ಲಿ ಕೊರೊನಾಗೆ 43,000 ಜನರು ಬಲಿಯಾಗಿದ್ದಾರೆ.