93 ವರ್ಷದ ನಾಜಿ ಕಾವಲುಗಾರನನ್ನು ಜರ್ಮನಿಯ ನ್ಯಾಯಾಲಯವು 5230 ಜನರ ಹತ್ಯೆ ಆರೋಪದ ಮೇಲೆ ಶಿಕ್ಷೆಗೊಳಪಡಿಸಿದೆ. ಅಪರಾಧಿ ಹೆಸರು ಬ್ರೂನೋ ಡೇ. ಬ್ರೂನೋ 75 ವರ್ಷಗಳ ಹಿಂದೆ ಸ್ಟ್ಯಾಥಾಫ್ ಕಾನ್ಸಂಟ್ರೇಶನ್ ಕ್ಯಾಂಪ್ನಲ್ಲಿ ಕಾವಲುಗಾರನಾಗಿದ್ದ.
ಬ್ರೂನೋ ಡಿ ಪೋಲೆಂಡ್ ಆಗಸ್ಟ್ 1944 ರಿಂದ ಏಪ್ರಿಲ್ 1945 ರವರೆಗೆ ಡ್ಯಾನ್ಸ್ಕ್ ನ ಪೂರ್ವದಲ್ಲಿರುವ ಸ್ಟ್ಯಾಥಾಫ್ ಕಾನ್ಸಂಟ್ರೇಶನ್ ಕ್ಯಾಂಪ್ನಲ್ಲಿ ಕಾವಲುಗಾರನಾಗಿದ್ದ. ಎರಡನೆಯ ಮಹಾಯುದ್ಧ ಮುಗಿದ ನಂತರವೂ ಬ್ರೂನೋ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಆಗ ಅವನಿಗೆ ಕೇವಲ 17 ವರ್ಷ ವಯಸ್ಸಾಗಿತ್ತು.
ಅಪ್ರಾಪ್ತ ವಯಸ್ಕ ಎಂಬ ಕಾರಣಕ್ಕೆ ಆತನಿಗೆ ಎರಡು ವರ್ಷ ಶಿಕ್ಷೆ ವಿಧಿಸಲಾಗಿತ್ತು ನಂತರ ಹೊರಗೆ ಬಂದಿದ್ದ. ಬ್ರೂನೋ ಕೈನಿಂದ ಸಾವನ್ನಪ್ಪಿದ್ದವರ ಕುಟುಂಬಸ್ಥರು ಈ ಶಿಕ್ಷೆ ಕಡಿಮೆ ಎಂದು ಮತ್ತೆ ಧ್ವನಿ ಎತ್ತಿದ್ದರು.
ನಾಜಿ ಯುಗದ ಅಪರಾಧಿಗಳಿಗೆ ಶಿಕ್ಷೆ ನೀಡುವ ಪ್ರಕ್ರಿಯೆಯು ಜರ್ಮನಿಯಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದೆ. ಈಗ ಬ್ರೂನೋಗೆ 93 ವರ್ಷ. ವಿಚಾರಣೆ ವೇಳೆ ಗಾಲಿಕುರ್ಚಿಯಲ್ಲಿ ಕರೆತರಲಾಯ್ತು. ಕೋರ್ಟ್ ತೀರ್ಪು ನೀಡ್ತಿದ್ದಂತೆ ಬ್ರೂನೋ ಕಣ್ಣು ಕೆಳಗೆ ಹಾಕಿದ್ದ.