ಕಳೆದ 80 ವರ್ಷಗಳಿಂದ ಕಟ್ಟಿಂಗ್ ಮಾಡಿಸಿಕೊಳ್ಳದೇ ತನ್ನ ತಲೆಗೂದಲನ್ನು ಬೆಳೆಯಲು ಬಿಟ್ಟಿರುವ ವಿಯೆಟ್ನಾಂನ 92 ವರ್ಷದ ವ್ಯಕ್ತಿಯೊಬ್ಬರು ಭಾರೀ ಸುದ್ದಿಯಲ್ಲಿದ್ದಾರೆ.
ಗುಯೆನ್ ವಾನ್ ಚಿಯೆನ್ ಹೆಸರಿನ ಈ ವ್ಯಕ್ತಿ, ಪ್ರಕೃತಿ ಸಹಜವಾಗಿ ಏನೆಲ್ಲಾ ಇರುತ್ತದೋ ಅದನ್ನು ಹಾಗೇ ಬಿಟ್ಟುಬಿಡಬೇಕು ಎಂದು ನಂಬಿಕೊಂಡಿದ್ದು, 5 ಮೀಟರ್ ಉದ್ದದ ಕೇಶರಾಶಿಯನ್ನು ಹೊಂದಿದ್ದಾರೆ.
“ನನ್ನ ಕೇಶವನ್ನು ಕತ್ತರಿಸಿದರೆ ನಾನು ಸತ್ತೇ ಹೋಗುತ್ತೇನೆ ಅನಿಸುತ್ತದೆ. ನಾನು ಕೂದಲನ್ನು ಬಾಚುವುದೂ ಇಲ್ಲ. ನಾನು ಅದಕ್ಕೆ ಪೋಷಣೆ ಮಾಡುತ್ತೇನೆ ಹಾಗೂ ಕೂದಲನ್ನು ಒಣಗಿಸಿ, ಸ್ವಚ್ಛವಾಗಿಡಲು ಸ್ಕಾರ್ಫ್‌ನಿಂದ ಹಾಗೇ ಮುಚ್ಚಿಕೊಳ್ಳುತ್ತೇನೆ” ಎನ್ನುತ್ತಾರೆ ಚಿಯೆನ್.
ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ವೇಳೆ ಕೊನೆಯ ಬಾರಿಗೆ ತಮ್ಮ ಕೂದಲು ಕಟ್ ಮಾಡಿಸಿಕೊಂಡಿದ್ದರು ಚಿಯೆನ್.