ಸೈಬರ್ ಕಳ್ಳರ ವಂಚನೆಗೆ ಬಲಿಯಾದ 90 ವರ್ಷದ ವೃದ್ಧೆ ಬರೋಬ್ಬರಿ 241 ಕೋಟಿ ರೂಪಾಯಿಗಳನ್ನ ಕಳೆದುಕೊಂಡಿದ್ದಾಳೆ ಎಂದು ಚೀನಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದು ಈ ನಗರದಲ್ಲಿ ಇಲ್ಲಿಯವರೆಗೆ ನಡೆದ ಅತ್ಯಂತ ದೊಡ್ಡ ಪ್ರಮಾಣದ ಫೋನ್ ಹಗರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮ್ಯಾನ್ಶನ್ನಲ್ಲಿ ವಾಸಿಸುತ್ತಿದ್ದ ವೃದ್ಧೆಯನ್ನ ಟಾರ್ಗೆಟ್ ಮಾಡಿದ ಕ್ರಿಮಿನಲ್ಗಳು ಆಕೆಯ ಬಳಿ ಚೀನಾ ಭದ್ರತಾ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ನಿಮ್ಮ ಗುರುತನ್ನ ದೊಡ್ಡ ಅಪರಾಧ ಚಟುವಟಿಕೆಗೆ ಬಳಸಿಕೊಳ್ಳಲಾಗ್ತಿದೆ ಎಂದು ವೃದ್ಧೆಗೆ ಕ್ರಿಮಿನಲ್ಗಳು ಸುಳ್ಳು ಹೇಳಿದ್ದಾರೆ.
ಇದಕ್ಕಾಗಿ ನೀವು ಈ ಕೂಡಲೇ ಹಣವನ್ನ ವರ್ಗಾಯಿಸಬೇಕು ಎಂದು ಆಕೆಗೆ ಹೇಳಲಾಗಿದೆ. ಇದರಿಂದ ಹೆದರಿದ ವೃದ್ಧೆ ಬರೋಬ್ಬರಿ 241 ಕೋಟಿ ರೂಪಾಯಿಯನ್ನ ಕಳೆದುಕೊಂಡಿದ್ದಾಳೆ. ಈ ಫೋನ್ ಕಾಲ್ಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮನೆಗೆಲಸದವರು ವೃದ್ಧೆಯ ಮಗಳಿಗೆ ಫೋನಾಯಿಸಿದ್ದು ಬಳಿಕ ಈ ಹಗರಣ ಬೆಳಕಿಗೆ ಬಂದಿದೆ.
ವಿಶ್ವದ ಅತಿಹೆಚ್ಚು ಕೋಟ್ಯಾಧಿಪತಿಗಳನ್ನ ಹಾಂಕಾಂಗ್ ನಗರ ಹೊಂದಿದೆ. ಇದರಲ್ಲಿ ವೃದ್ಧರನ್ನ ಹೆಚ್ಚಾಗಿ ಕ್ರಿಮಿನಲ್ಗಳು ಗುರಿಯಾಗಿಸುತ್ತಾರೆ.