ಕೊರೊನಾ ವೈರಸ್ ಸೋಂಕಿನಿಂದ ವೃದ್ಧ ದಂಪತಿ ಸಾವಿಗೀಡಾಗಿದ್ದು ಈ ಘಟನೆ ಕೇಳಿದವರ ಕಣ್ಣಲ್ಲಿ ನೀರು ಜಿನುಗಿದೆ.
90 ವರ್ಷದ ಜಿಮ್ ಮಾರ್ಟಿನ್ ಎಂಬವರು ತನ್ನ 88 ವರ್ಷದ ಪತ್ನಿ ಕೊರೊನಾದಿಂದ ಸಾವಿಗೀಡಾದ ಒಂದು ದಿನದಲ್ಲೇ ಸಾವನ್ನಪ್ಪಿದ್ದಾರೆ. ಈ ಜೋಡಿ 67 ವರ್ಷಗಳಿಂದ ಜೊತೆಯಾಗಿತ್ತು. ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಇಬ್ಬರನ್ನ ಜನವರಿಯಲ್ಲಿ ರಾಯಲ್ ಸ್ಟೋಕ್ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪತ್ನಿ ಆಡ್ರೆ ಜನವರಿ 26ರಂದು ಕೊರೊನಾದಿಂದ ಮೃತರಾಗಿದ್ದಾರೆ. ಮಾರನೇ ದಿನವೇ ಪತಿ ಜಿಮ್ ಸಾವನ್ನಪ್ಪಿದ್ದಾರೆ.
ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕನ ಕಣ್ಣೀರ ಕಥೆ
ಸೋಮರ್ಸೆಟ್ನ 75 ವರ್ಷದ ಸಿಂಥಿಯಾ ಹಾಗೂ 77 ವರ್ಷದ ವೆಲ್ಲಿಂಗ್ಟನ್ ದಂಪತಿ ಕೊರೊನಾ ವೈರಸ್ನಿಂದಾಗಿ 7 ಗಂಟೆಯ ಅಂತರದಲ್ಲಿ ಸಾವಿಗೀಡಾಗಿದ್ದಾರೆ. ಇವರಿಬ್ಬರನ್ನ 40 ಮೈಲಿ ದೂರದಲ್ಲಿರುವ ವಿಭಿನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜನವರಿ 5ರಂದು ಸಿಂಥಿಯಾರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ರೆ ಇದಾದ ಬಳಿಕ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಬ್ಬರೂ ಜನವರಿ 22ರಂದು ಸಾವನ್ನಪ್ಪಿದ್ದಾರೆ.