ಕೀನ್ಯಾ: ಕೊರೋನಾ ವೈರಸ್ ತಡೆಗೆ ಕೈತೊಳೆಯುವ ಮರದ ಯಂತ್ರ ತಯಾರಿಸಿದ ಕೀನ್ಯಾದ 9 ವರ್ಷದ ಬಾಲಕ ಅಲ್ಲಿನ ರಾಷ್ಟ್ರಪತಿಗಳ ಪದಕಕ್ಕೆ ಭಾಜನನಾಗಿದ್ದಾನೆ.
ಪಶ್ಚಿಮ ಕೀನ್ಯಾದ ಬುಂಗೊಮಾ ಕೌಂಟಿಯ ಸ್ಟೀಫನ್ ವಾಮುಕೊಟಾ ಎಂಬ ಬಾಲಕ ಸಣ್ಣ ನೀರಿನ ಡಬ್ಬಿ, ಮರದ ತುಂಡುಗಳನ್ನು ಬಳಸಿ ಅರೆ ಸ್ವಯಂಚಾಲಿತ ಕೈ ತೊಳೆಯುವ ಯಂತ್ರ ತಯಾರಿಸಿದ್ದಾನೆ.
“ಕೋವಿಡ್-19 ನಿಂದ ಬಚಾವಾಗಲು ಇರುವ ವಿಧಾನಗಳ ಕುರಿತು ಸ್ಥಳೀಯ ಟಿವಿ ಚಾನಲ್ ಗಳಲ್ಲಿ ನೋಡಿದ ಸ್ಟೀಫನ್ ಕೈ ತೊಳೆಯುವ ಯಂತ್ರ ತಯಾರಿಸುವ ಯೋಜನೆ ರೂಪಿಸಿದ್ದ. ನಾನು ಕಿಟಕಿ ಮಾಡಲು ತಂದಿಟ್ಟ ಕಟ್ಟಿಗೆ ಬಳಸಿ ಯಂತ್ರ ಸಿದ್ಧ ಮಾಡಿದ. ನಂತರ ಕೆಲವು ಬದಲಾವಣೆ ಮಾಡಬೇಕು ಎಂಬ ಅರಿವಾಯಿತು. ಇನ್ನಷ್ಟು ಕಟ್ಟಿಗೆ ಬಳಸಿ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುವ ಯಂತ್ರ ತಯಾರಿಸಿದ ಎಂದು ಸ್ಟೀಫನ್ ತಂದೆ ಜೇಮ್ಸ್ ಸುದ್ದಿ ಚಾನಲ್ ಗಳಿಗೆ ಹೇಳಿಕೆ ನೀಡಿದ್ದಾರೆ.
ಯಂತ್ರವು ಎರಡು ಪ್ಯಾಡಲ್ ಹೊಂದಿದ್ದು, ಒಂದನ್ನು ಒತ್ತಿದರೆ ಸೋಪ್ ಇನ್ನೊಂದನ್ನು ಒತ್ತಿದರೆ ನೀರು ಬರುತ್ತದೆ. ಕರೊನಾ ನಿಯಂತ್ರಣಕ್ಕೆ ಇದು ಸಹಕಾರಿಯಾಗಿದೆ. ಬಾಲಕನಿಗೆ ಕೀನ್ಯಾ ಅಧ್ಯಕ್ಷ ಬಹುಮಾನ ವಿತರಿಸಿದ್ದಾರೆ.