ಆಂಧ್ರ ಪ್ರದೇಶದ 9 ವರ್ಷದ ಬಾಲಕಿ ಆಫ್ರಿಕಾದ ಅತ್ಯುನ್ನತ ಶಿಖರವಾದ ಕಿಲಿಮಂಜಾರೋವನ್ನ ಏರಿದ ಏಷ್ಯಾ ಖಂಡದ ಅತಿ ಚಿಕ್ಕ ಹುಡುಗಿ ಎಂಬ ಕೀರ್ತಿಗೆ ಭಾಜನಳಾಗಿದ್ದಾಳೆ.
ಕಡಪ್ಪಲ ರಿತ್ವಿಕಾ ಶ್ರೀ ಅನಂತಪುರಂನ ಅಗ್ರಹಾರಂ ಗ್ರಾಮದ ಬಾಲಕಿಯಾಗಿದ್ದಾಳೆ. ಈಕೆ ಶುಕ್ರವಾರದಂದು ಈ ಕೀರ್ತಿಗೆ ಭಾಜನಳಾಗಿದ್ದಾಳೆ.
ತನ್ನ ತಂದೆ ಕಡಪ್ಪಲ ಶಂಕರ್ ಜೊತೆ ರಿತ್ವಿಕಾ ಕಿಲಿಮಂಜಾರೋವನ್ನ ಏರಿದ್ದಾಳೆ. ಶಂಕರ್ ಸ್ಪೆಶಲ್ ಒಲಿಂಪಿಂಕ್ ಕ್ರಿಕೆಟ್ ಕೋಚ್ ಆಗಿದ್ದು ಪುತ್ರಿಗೆ ಪರ್ವತಾರೋಹಣದ ಮಾರ್ಗದರ್ಶಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಕಳೆದ ವರ್ಷ ಜನವರಿ 24ರಂದು ಟಾಂಜಾನಿಯಾ ಪರ್ವತ ಏರಿದ್ದರು.
ರಿತ್ವಿಕಾ ಸಮುದ್ರ ಮಟ್ಟದಿಂದ 5685 ಮೀಟರ್ ಎತ್ತರವಿರುವ ಪರ್ವತವನ್ನ ಏರುವ ಮೂಲಕ ಈ ಸಾಧನೆ ಮಾಡಿದ್ದಾಳೆ. ಬಾಲಕಿಯ ಈ ಸಾಧನೆಗೆ ಪ್ರೋತ್ಸಾಹ ನೀಡಿದ್ದ ಜಿಲ್ಲಾಧಿಕಾರಿ ಗಾಂಧಮ್ ಚಂದ್ರುಡು ಫೆಬ್ರವರಿ 1ರಂದು ಎಸ್ಸಿ ಕಾರ್ಪೋರೇಷನ್ನಿಂದ 2,98,835 ರೂ. ಹಣವನ್ನ ಬಿಡುಗಡೆ ಮಾಡಿದ್ದರು.
ಗ್ರಾಹಕ ನೀಡಿದ ಕೆಂಪು ಲಕೋಟೆ ತೆರೆದು ನೋಡಿದವರಿಗೆ ಕಾದಿತ್ತು ದೊಡ್ಡ ʼಅಚ್ಚರಿʼ
ಇದೀಗ ಬಾಲಕಿಯ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಚಂದ್ರುಡು, ಕಿಲಿಮಂಜಾರೋ ಶಿಖರವನ್ನ ಏರಿದ ವಿಶ್ವದ ಎರಡನೇ ಹಾಗೂ ಏಷ್ಯಾದ ಮೊದಲ ಬಾಲಕಿ ಎಂಬ ಕೀರ್ತಿಗೆ ಪಾತ್ರರಾದ ರಿತ್ವಿಕಾಗೆ ಅಭಿನಂದನೆಗಳು. ಸಾಕಷ್ಟು ಅಡೆತಡೆಗಳ ನಡುವೆಯೂ ನೀನು ಅವಕಾಶವನ್ನ ಹುಡುಕಿಕೊಂಡಿದ್ದೀಯಾ. ಇದರಿಂದ ಸ್ಪೂರ್ತಿ ನೀಡುತ್ತಲೇ ಇರು ಎಂದು ಟ್ವೀಟಾಯಿಸಿದ್ದಾರೆ.