ತನ್ನ ದೇಹದ ಉದ್ದದ ಅರ್ಧದಷ್ಟು ಇರುವ ಕಡ್ಡಿಯೊಂದನ್ನು ನುಂಗಿಬಿಟ್ಟ ಕಾರಣ ಒಂಬತ್ತು ತಿಂಗಳ ನಾಯಿ ಮರಿಯೊಂದಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು.
ಬ್ರಿಟನ್ ನಲ್ಲಿ ನಡೆದ ಈ ಘಟನೆಯಲ್ಲಿ ರಾಕಿ ಹೆಸರಿನ ನಾಯಿ ಮರಿಗೆ ಪದೇ ಪದೇ ಹುಷಾರು ತಪ್ಪುತ್ತಿತ್ತು ಹಾಗೂ ವಾಂತಿ ಮಾಡಿಕೊಳ್ಳುತ್ತಿತ್ತು. ಇದಾದ ಬೆನ್ನಿಗೆ ಪ್ರಾಣಿದಯಾ ಸಂಘಟನೆಯ ಸಹಾಯ ಕೇಳಿದ ಅದರ ಯಜಮಾನಿ ಜೊಅನ್ನಾ, ನಾಯಿಯ ಹೊಟ್ಟೆಯಲ್ಲಿ ಬಾಹ್ಯ ವಸ್ತುವೊಂದು ಸೇರಿಕೊಂಡಿದೆ ಎಂದು ಪ್ರಾಥಮಿಕ ಪರೀಕ್ಷೆಯಿಂದ ತಿಳಿದುಕೊಂಡಿದ್ದಾರೆ.
ಸರ್ಜರಿ ಮಾಡಿದ ವೇಳೆ ಬಹಳ ಉದ್ದದ ಕಡ್ಡಿಯೊಂದು ಪತ್ತೆಯಾದ ಬಳಿಕ ಯಜಮಾನಿ ಹಾಗೂ ವೈದ್ಯರು ಅಚ್ಚರಿಗೀಡಾಗಿದ್ದಾರೆ. ಅದೃಷ್ಟವಶಾತ್ ಈ ಕಡ್ಡಿ ನಾಯಿಯ ಒಳಹೊಕ್ಕು ಆಂತರಿಕ ಅಂಗಗಳಿಗೆ ಯಾವುದೇ ಹಾನಿ ಮಾಡಿರಲಿಲ್ಲ. ಒಂದು ಗಂಟೆಯ ಶಸ್ತ್ರಚಿಕಿತ್ಸೆ ಬಳಿಕ ಕಡ್ಡಿಯನ್ನು ಬಲೇ ನಾಜೂಕಾಗಿ ಹೊರತೆಗೆಯಲಾಗಿದೆ.