ವಯಸ್ಸಿಗೆ ಬಂದ ಯುವಕ-ಯುವತಿಯರಲ್ಲಿ ಪ್ರೀತಿ ಚಿಗುರುವುದು ಮಾಮೂಲಿ. ಆದ್ರೆ 81ನೇ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದು ಮದುವೆಯಾಗುವುದು ವಿಶೇಷ. ಅದ್ರಲ್ಲೂ ವೃದ್ಧೆಯೊಬ್ಬಳು 35 ವರ್ಷದ ಯುವಕನ್ನು ಮದುವೆಯಾಗುವುದು ಅಪರೂಪದ ಸಂಗತಿ. ಮದುವೆ ನಂತ್ರ ತನ್ನ ಜೀವನ ಹೇಗಿದೆ ಎಂಬುದನ್ನು ಆಕೆ ಹೇಳಿದ್ದಾಳೆ.
ಐರಿಸ್ ಜಾನ್ ಬ್ರಿಟನ್ ಮೂಲದ ಮಹಿಳೆ. ಆಕೆ ಈಜಿಪ್ಟ್ ಹುಡುಗನನ್ನು ಮದುವೆಯಾಗಿದ್ದಾಳೆ. ತನಗಿಂತ 46 ವರ್ಷ ಚಿಕ್ಕವನಿರುವ ಅಹಮದ್ ಇಬ್ರಾಹಿಂನನ್ನು ಆಕೆ ಹಿಂದಿನ ವರ್ಷ ಫೇಸ್ಬುಕ್ ಮೂಲಕ ಭೇಟಿಯಾಗಿದ್ದಳು. ಇಬ್ಬರ ಮಧ್ಯೆ ಸ್ನೇಹ ಚಿಗುರಿ ಇಬ್ಬರೂ ಒಟ್ಟಿಗೆ ವಾಸಿಸಲು ಶುರು ಮಾಡಿದ್ದರು.
ಈಗ ಆಕೆ ಪತಿ ಈಜಿಪ್ಟ್ ನಲ್ಲಿದ್ದಾನೆ. ಆಕೆ ಬ್ರಿಟನ್ ನಲ್ಲಿದ್ದಾಳೆ. ಇದು ಆಕೆಯ ಬೇಸರಕ್ಕೆ ಕಾರಣವಾಗಿದೆ. ನಾನು ಮೂರು ಬಾರಿ ಈಜಿಪ್ಟ್ ಗೆ ಭೇಟಿ ನೀಡಿದ್ದೆ. ಅಲ್ಲಿಯ ವಾತಾವರಣ ನನಗೆ ಆಗುವುದಿಲ್ಲ. ಹಾಗಾಗಿ ಬ್ರಿಟನ್ ಗೆ ವಾಪಸ್ ಬಂದಿದ್ದೇನೆ. ಸಾವು ಹತ್ತಿರವಾಗ್ತಿದೆ. ಪ್ರತಿ ದಿನವೂ ನನಗೆ ಮಹತ್ವದ್ದು ಎಂದು ಐರಿಸ್ ಬೇಸರ ವ್ಯಕ್ತಪಡಿಸಿದ್ದಾಳೆ.
ಅಹಮದ್ ಗೆ ಬ್ರಿಟನ್ ವೀಸಾ ಸಿಕ್ತಿಲ್ಲ. ಇದ್ರಿಂದ ಅಹಮದ್ ಬ್ರಿಟನ್ ಗೆ ಬರಲು ಸಾಧ್ಯವಾಗ್ತಿಲ್ಲ. ಪತಿಯನ್ನು ಭೇಟಿಯಾಗದೆ ನಾನು ಸಾವನ್ನಪ್ಪಿದ್ರೆ ಎಂಬ ದುಃಖ ಐರಿಸ್ ಗಿದೆ. ಬ್ರಿಟನ್ ಪ್ರಧಾನಿಗೆ ಐರಿಸ್ ಪತ್ರ ಬರೆದಿದ್ದು, ವೀಸಾ ನೀಡುವಂತೆ ಮನವಿ ಮಾಡಿದ್ದಾಳೆ.