alex Certify ʼಕೊರೊನಾʼ ಸೋಂಕಿನ ಕುರಿತು ಮತ್ತೊಂದು ಮಹತ್ವದ ಅಂಶ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸೋಂಕಿನ ಕುರಿತು ಮತ್ತೊಂದು ಮಹತ್ವದ ಅಂಶ ಬಹಿರಂಗ

ಕೊರೊನಾ ಸೋಂಕಿಗೆ ಒಳಗಾದ ರೋಗಿಗಳು ವಿಟಮಿನ್​ ಡಿ ಕೊರತೆ ಹೊಂದಿರುತ್ತಾರೆ ಅಂತಾ ಸ್ಪೇನ್​ನ ಅಧ್ಯಯನವೊಂದು ಹೇಳಿದೆ. ಸ್ಪೇನ್​ನ ಆಸ್ಪತ್ರೆಯಲ್ಲಿ ದಾಖಲಾದ 200 ರೋಗಿಗಳ ಮೇಲೆ ನಡೆಸಲಾದ ಅಧ್ಯಯನದಲ್ಲಿ ಶೇಕಡಾ 80ರಷ್ಟುಮಂದಿಯಲ್ಲಿ ವಿಟಮಿನ್​ ಡಿ ಕೊರತೆ ಕಾಣಿಸಿಕೊಂಡಿದೆ.

ಜರ್ನಲ್​ ಆಫ್​ ಕ್ಲಿನಿಕಲ್​ ಎಂಡೋಕ್ರೈನಾಲಜಿ ಹಾಗೂ ಮೆಟಬಾಲಿಸಂನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ವಿಟಮಿನ್​ ಡಿ ಕೊರತೆ ಬಗ್ಗೆ ತಿಳಿಸಲಾಗಿದೆ. ಆದರೆ ವಿಟಮಿನ್​ ಡಿ ಕೊರತೆಗೂ ಕೊರೊನಾಗೂ ಏನು ಸಂಬಂಧ ಅನ್ನೋದ್ರ ಬಗ್ಗೆ ಯಾವುದೇ ಸಂಶೋಧನೆಯನ್ನ ಮಾಡಿಲ್ಲ ಅಂತಾ ಸಂಶೋಧಕರು ಹೇಳಿದ್ದಾರೆ

ವಿಟಮಿನ್​ ಡಿ ಕೊರತೆ ಹೊಂದಿದ ರೋಗಿಗಳಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಜಾಸ್ತಿ ಇದೆ. ಹೀಗಾಗಿ ಕೊರೊನಾ ರೋಗಿಗಳಿಗೆ ವಿಟಮಿನ್​ ಡಿ ಹೊಂದಿರುವ ಪದಾರ್ಥಗಳನ್ನ ನೀಡಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯವಾಗುತ್ತೆ ಅಂತಾ ಕ್ಯಾಂಟಾಬ್ರಿಯಾ ವಿಶ್ವವಿದ್ಯಾಲಯದ ಜೋಸ್​ ಎಲ್​ ಹೆರ್ನಾಂಡೆಜ್​ ಅಭಿಪ್ರಾಯ ಪಟ್ಟಿದ್ದಾರೆ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...