
ವಿಶ್ವದಲ್ಲಿ ಕೊರೋನಾ ಕಾಣಿಸಿಕೊಂಡಾಗಿನಿಂದ ಎಲ್ಲರಲ್ಲೂ ಒಂದು ಬಗೆಯ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಬ್ಬರಿಗೂ ಭವಿಷ್ಯದ ಯೋಚನೆ ಬಂದಾಗಲೆಲ್ಲ ಪ್ರಶ್ನಾರ್ಥಕ ಚಿಹ್ನೆಯೂ ಮೂಡುತ್ತಿದೆ.
ಆದರೆ ಇದೀಗ ಎಲ್ಲರಿಗೂ ಬೇಕಿರುವುದು ಭರವಸೆಯ, ಪ್ರೀತಿಯ ಮಾತಷ್ಟೆ. ಇದೇ ರೀತಿಯ ವಿಡಿಯೊವೊಂದು ಇದೀಗ ವೈರಲ್ ಆಗಿದೆ.
ಮ್ಯಾಚಿಸ್ಟರ್‌ನಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದ್ದು, ತಲೂಲಾ ಎನ್ನುವ ಬಾಲಕಿ ತಮ್ಮ ಮನೆಗೆ ಬಂದ ಡೆಲಿವರಿ ಬಾಯ್ ಜತೆ ಮಾತನಾಡಿದ್ದಾಳೆ. ಇದರಲ್ಲಿ ವಿಶೇಷತೆ ಎಂದರೆ, ಆ ಡೆಲಿವರಿ ಬಾಯ್‌ಗೆ ಶ್ರವಣ ದೋಷವಿದ್ದು, ಆತನೊಂದಿಗೆ ಸನ್ಹೆ ಭಾಷೆಯಲ್ಲಿ ಮಾತನಾಡಿದ್ದಾಳೆ. ಇದನ್ನು ಆಕೆಯ ತಾಯಿ ವಿಡಿಯೊ ಮಾಡಿದ್ದು ಇದೀಗ ವೈರಲ್ ಆಗಿದೆ.
ವಿಡಿಯೊದಲ್ಲಿ ಬಾಲಕಿ ಆತನಿಗೆ ಗುಡ್ ಡೇ ಎಂದು ಹೇಳಿದ್ದು, ಅದಕ್ಕೆ ಆತನೂ ಪ್ರತಿಕ್ರಿಯಿಸಿದ್ದಾನೆ. ಇದೀಗ ಈ ವಿಡಿಯೊ ವೈರಲ್ ಆಗಿದ್ದು ಐದು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.