ಒಂದು ಕಡೆ ಕೊರೊನಾದಿಂದಾಗಿ ಕಂಪನಿಗಳಲ್ಲಿ ನೌಕರರನ್ನು ತೆಗೆದು ಹಾಕಲಾಗುತ್ತಿದೆ. ಮತ್ತೊಂದು ಕಡೆ ಹೊಸ ಮಸೂದೆ ಜಾರಿಗೆ ತರುತ್ತಿರುವುದು ಹೊರ ದೇಶದಲ್ಲಿರುವ ಭಾರತೀಯರಿಗೆ ಸಂಕಷ್ಟ ಎದುರಾಗಿದೆ. ಇದರಿಂದ ನೆಲೆಸಿರುವ ದೇಶದಿಂದ ಭಾರತೀಯರು ಹೊರ ಬರುವ ಆತಂಕ ಎದುರಾಗಿದೆ.
ಹೌದು, ತೈಲ ಬೆಲೆ ಕುಸಿತ ಹಾಗು ಕೊರೊನಾ ವೈರಸ್‌ನಿಂದಾಗಿ ಇಂತಹ ಪರಿಸ್ಥಿತಿ ಕುವೈತ್ ನಲ್ಲಿರುವ ಭಾರತೀಯರಿಗೆ ಎದುರಾಗಿದೆ. ಕೊಲ್ಲಿ ದೇಶದಲ್ಲಿ ವಿದೇಶಿ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸುವ ಮಸೂದೆಯ ಕರಡನ್ನು ರಾಷ್ಟ್ರೀಯ ಅಸೆಂಬ್ಲಿ ಅಂಗೀಕರಿಸಿದರೆ ಭಾರತೀಯರ ಮೇಲೂ ದೊಡ್ಡ ಪರಿಣಾಮ ಬೀರುವುದು ಗ್ಯಾರಂಟಿ.
ಈಗಾಗಲೇ ಕುವೈತ್‌ನಲ್ಲಿ ಸುಮಾರು ಎಂಟು ಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ. ಇದೀಗ ಹೊಸ ಮಸೂದೆಯಿಂದ ಇವರ ತಲೆ ಮೇಲೆ ಕತ್ತಿ ತೂಗಾಡುತ್ತಿದೆ. ಇಷ್ಟು ಮಂದಿಯೂ ದುಬೈನಿಂದ ಹೊರಗೆ ಬರುವ ಆತಂಕ ಎದುರಾಗಿದೆ. ಕುವೈತ್‌ನಲ್ಲಿ ವಿದೇಶಿಯರ ಜನಸಂಖ್ಯೆ 3 ಮಿಲಿಯನ್ ಇದೆಯಂತೆ.