alex Certify ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ 79 ರ ವೃದ್ಧನಿಗೆ 4.7 ಲಕ್ಷ ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ 79 ರ ವೃದ್ಧನಿಗೆ 4.7 ಲಕ್ಷ ರೂ. ದಂಡ

ಇಂಗ್ಲೆಂಡ್ ನ ಗ್ಯುರೆನ್ಸಿಯಿಂದ ಪೂಲ್ ಗೆ ಪ್ರಯಾಣಿಸಿದ್ದ ಹೆನ್ರಿ ಎಂಬ 79 ವರ್ಷದ ಹಿರಿಯ ನಾಗರಿಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ, 14 ದಿನ ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿ ಇರುವಂತೆ ಸ್ಥಳೀಯ ಪೊಲೀಸ್ ಹಾಗೂ ವೈದ್ಯಾಧಿಕಾರಿಗಳು ಸೂಚಿಸಿದ್ದರು. ಆದರೆ, ಈ ವೃದ್ಧ ಮಾಡಿದ್ದೇನು ಗೊತ್ತೆ ? ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಹೆನ್ರಿ, ಸರ್ಕಾರವೇ ವಿಧಿಸಿದ್ದ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ದುಬಾರಿ ದಂಡ ತೆರುವಂತಾಗಿದೆ.

ಮನೆಯಲ್ಲಿರಲು ಹೇಳಿ ಹೋಗಿದ್ದ ಪೊಲೀಸರು ಮೇಲ್ವಿಚಾರಣೆಗೆಂದು ಬಂದು ನೋಡಿದರೆ ಹೆನ್ರಿ ಮನೆಯಲ್ಲಿ ಇರಲಿಲ್ಲ. ಜಾಡು ಹಿಡಿದು ಹೊರಟ ಪೊಲೀಸರಿಗೆ ಕ್ರ್ಯಾಬಿ ಜಾಕ್ ಪಬ್ ನ ವಾಹನ ನಿಲುಗಡೆ ಪ್ರದೇಶದಲ್ಲಿ ಹೆನ್ರಿಯ ಕಾರು ಪತ್ತೆಯಾಗಿದೆ.

ಒಳಪ್ರವೇಶಿಸಿ ನೋಡಿದರೆ ಹೆನ್ರಿ ಆರಾಮವಾಗಿ ಕೂತು ಮದ್ಯಪಾನ ಮಾಡುತ್ತಿದ್ದನ್ನ ಕಂಡು ಪೊಲೀಸರು ಪ್ರಶ್ನಿಸಿದ್ದಾರೆ. ಹೆನ್ರಿಯನ್ನು ಮಾತ್ರವಲ್ಲದೆ, ಪಬ್ ನ ಕ್ರೆಬಿ ಜಾಕ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೋಮ್ ಐಸೋಲೇಶನ್ ಮೊಹರು ಇದ್ದರೂ ಪಬ್ ಒಳಗೆ ಅವಕಾಶ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಈ ವಿಷಯ ತನಗೆ ಗೊತ್ತಿರಲಿಲ್ಲ ಎಂದು ಹೆನ್ರಿ ವಿರುದ್ಧ ಜಾಕ್ ಹರಿಹಾಯ್ದಿದ್ದಾನೆ.

ಕೊನೆಗೆ ಹೆನ್ರಿಯನ್ನು ನ್ಯಾಯಾಧೀಶರ ಮುಂದೆ ನಿಲ್ಲಿಸಿದಾಗ ತಪ್ಪೊಪ್ಪಿಕೊಂಡಿದ್ದು, ಒಟ್ಟು 5 ಸಾವಿರ ಪೌಂಡ್ (4.7 ಲಕ್ಷ ರೂ.) ದಂಡ ವಿಧಿಸಿದ್ದು, ಮುಂದಿನ ತಿಂಗಳಾಂತ್ಯದವರೆಗೆ ದಂಡ ಕಟ್ಟಲು ಕಾಲಾವಕಾಶ ನೀಡಲಾಗಿದೆ. ಆದರೆ, ಸದ್ಯಕ್ಕೆ ಕನಿಷ್ಠ 1,500 ಪೌಂಡ್ ಕಟ್ಟಲೇಬೇಕು. ಅಲ್ಲಿಯವರೆಗೆ ವಶದಲ್ಲಿ ಇಟ್ಟುಕೊಳ್ಳುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...